ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ರಾಜೀವ್ ಶುಭಾರಂಭ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಬಿಸಿಸಿಯ ರಾಜೀವ್ ರಾಜಗೋಪಾಲ ಅವರು ಇಲ್ಲಿ ಆರಂಭವಾದ ಯೊನೆಕ್ಸ್ ಸನ್ ರೈಸ್ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ 10 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಶುಭಾರಂಭ ಮಾಡಿದರು.

ಶನಿವಾರ ಇಲ್ಲಿನ ದೇವನಹಳ್ಳಿ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ರಾಜೀವ್ 21-14, 21-7ರಲ್ಲಿ ಜೆಜಿಆರ್‌ವಿಕೆಯ ಎಸ್.ಆರ್. ಅನಿರುಧ್ ವಿರುದ್ಧ ಗೆಲುವು ಪಡೆದರು. ಇದೇ ವಿಭಾಗದಲ್ಲಿ ಬೆಳಗಾವಿಯ ಯಶ್ ಪಾಟೀಲ್ 21-4, 21-5ರಲ್ಲಿ ಹುಬ್ಬಳ್ಳಿಯ ಕೆ. ತರುಣ್ ರಮಣ್ ಮೇಲೂ, ಸನೀತ್ ಎಸ್. ದಯಾನಂದ್ 21-7, 21-7ರಲ್ಲಿ ಶಿವಮೊಗ್ಗದ ಯಶವಂತ ವಿರುದ್ಧವೂ, ಚಿನ್ಮಯ ವೇಂಕಟೇಶ್ 21-6, 21-7ರಲ್ಲಿ ಕೆ.ಜಿ. ಅರ್ಜುನ್ ಕೃಷ್ಣ ಮೇಲೂ, ಶಿವದೀಪ್ ಜಯಂತ್ 21-4, 21-5ರಲ್ಲಿ ಆರ್. ಆದಿತ್ಯ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT