ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಸಂತೃಪ್‌ಗೆ ಪ್ರಶಸ್ತಿ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಎಚ್.ವಿ.ಸಂತೃಪ್ ಹಾಗೂ ವಿಜೇತಾ ಹರೀಶ್ ಅವರು ರಾಜ್ಯ 10 ವರ್ಷದೊಳಗಿನವರ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಭಾನುವಾರ ತಲಾ ಎರಡು ಪ್ರಶಸ್ತಿಗಳನ್ನು ಜಯಿಸಿದರು.

ಮಹಿಳಾ ಸೇವಾ ಸಮಾಜ ಆಯೋಜಿಸಿದ್ದ ಟೂರ್ನಿಯ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಡಬ್ಲ್ಯುಪಿಬಿಎ ಕ್ಲಬ್‌ನ ಸಂತೃಪ್ 21-15, 21-14 ರಲ್ಲಿ ಅದೇ ಕ್ಲಬ್‌ನ ಸುಜಲ್ ಶೇಖರ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.

ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಸುಜಲ್ ಜೊತೆಗೂಡಿ ಆಡಿದ ಸಂತೃಪ್ 21-15, 21-11ರಲ್ಲಿ ಎಂಎಸ್‌ಬಿಎ ಕ್ಲಬ್‌ನ ನಾರಾಯಣ್ ಭಟ್- ಜಿ.ಎಸ್. ಸುಮುಕ್ ಜೋಡಿ ವಿರುದ್ಧ ಗೆದ್ದರು. ಇನ್ನು, ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ಎಚ್‌ಎಚ್‌ಬಿಎ ಕ್ಲಬ್‌ನ ಆರುಷಿ ರಾಜ್‌ಗೋಪಾಲ್ ಜೊತೆಗೂಡಿ ಆಡಿದ ಕಾಸ್ಮೋ ಕ್ಲಬ್‌ನ ವಿಜೇತಾ 21-14, 21-6 ರಲ್ಲಿ ಎಂಎಸ್‌ಬಿಎ ಕ್ಲಬ್‌ನ ಶೃದ್ಧಾ ಹೆಗ್ಡೆ-ಶುಭಗಾ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT