ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಸಿಂಧುಗೆ ಪ್ರಶಸ್ತಿ

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಕಾವು (ಪಿಟಿಐ): ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಇಲ್ಲಿ ನಡೆದ ಮಕಾವು ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸಕ್ತ ಋತುವಿನಲ್ಲಿ ಸಿಂಧುಗೆ ದೊರೆತ ಎರಡನೇ ಗ್ರ್ಯಾನ್ ಪ್ರಿ  ಪ್ರಶಸ್ತಿ  ಇದು.

ಭಾನುವಾರ ನಡೆದ ಸಿಂಗಲ್ಸ್‌ ಫೈನಲ್‌ನ 37 ನಿಮಿಷಗಳ ಆಟದಲ್ಲಿ ಸಿಂಧು 21–15, 21–12 ರಲ್ಲಿ  ಕೆನಡಾದ ಲಿ ಮಿಷೆಲ್‌ ಅವರನ್ನು ಮಣಿಸಿದರು.
ಆಟ ಆರಂಭವಾಗಿ ಎರಡು ನಿಮಿಷ ಕಳೆಯುವಷ್ಟರಲ್ಲೇ ಸಿಂಧು ಮೊದಲ ಸೆಟ್‌ನಲ್ಲಿ 7–0ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಿಂಧು ಎದುರಾಳಿ ಆಟಗಾರ್ತಿಯ ಮೇಲೆ ಒತ್ತಡ ಹೇರಿದರು. ನಂತರ ಪುಟಿದೆದ್ದ ಲಿ ತೀವ್ರ ಪೈಪೋಟಿ ಒಡ್ಡಿದರು. ಆದರೆ ಅಂತಿಮವಾಗಿ ಭಾರತದ ಆಟಗಾರ್ತಿ ಕೇವಲ 16 ನಿಮಿಷದಲ್ಲೇ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT