ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಬಾಲ್ಡ್‌ವಿನ್ ಬಾಲಕಿಯರ ಶಾಲೆಗೆ ಪ್ರಶಸ್ತಿ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡದಲ್ಲಿದ್ದ ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ ತಂಡದವರು ಕೇರಳದ ಇರಿಂಜಲಕುಡದಲ್ಲಿ ನಡೆದ ಕ್ರೈಸ್ಟ್ ವಿದ್ಯಾನಿಕೇತನ ಶಾಲೆ ಆಶ್ರಯದ ಹದಿನೈದನೇ ಐಸಿಎಸ್‌ಸಿಇ/ಐಎಸ್‌ಸಿ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಕಳೆದ ವಾರಂತ್ಯ ಮುಕ್ತಾಯಗೊಂಡ ಈ ಟೂರ್ನಿಯ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ ಬಾಲ್ಡ್‌ವಿನ್ ಬಾಲಕಿಯರ ಪ್ರೌಢ ಶಾಲೆ ತಂಡ 44-24 ರಲ್ಲಿ ಕೇರಳ ತಂಡವನ್ನು ಮಣಿಸಿತು. ಇದಕ್ಕೆ ಮೊದಲು ನಡೆದ ಸೆಮಿಫೈನಲ್‌ನಲ್ಲಿ   ಬಾಲ್ಡ್‌ವಿನ್ ಶಾಲೆ 31-15 ರಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿತು.

ಲೀಗ್ ಪಂದ್ಯಗಳಲ್ಲಿ ಬಾಲ್ಡ್‌ವಿನ್ ಶಾಲೆ ತಂಡದವರು ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದರು. ಲೀಗ್‌ನಲ್ಲಿ   ಬಾಲ್ಡ್‌ವಿನ್ ಶಾಲೆ 35-17 ರಲ್ಲಿ ಜಾರ್ಖಂಡ್ ಮೇಲೂ, 11-29 ರಲ್ಲಿ ಆಂಧ್ರಪ್ರದೇಶ ವಿರುದ್ಧವೂ ಗೆಲುವು ಪಡೆಯಿತು. ಕೇರಳ ತಂಡ 21-18 ರಲ್ಲಿ ಬಾಲ್ಡ್‌ವಿನ್ ಶಾಲೆ ತಂಡವನ್ನು ಸೋಲಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT