ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಭಾರತ ತಂಡ ಶುಭಾರಂಭ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಂದ್ಯದುದ್ದಕ್ಕೂ ತೀವ್ರ ಪೈಪೋಟಿ ಎದುರಾದರೂ ಭಾರತ ತಂಡದವರು ಇಲ್ಲಿ ಆರಂಭವಾದ 18 ವರ್ಷದೊಳಗಿನವರ ಎಫ್‌ಐಬಿಎ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಗೆಲುವು ಪಡೆದರು.

ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ 93-45ಪಾಯಿಂಟ್‌ಗಳಿಂದ ಶ್ರೀಲಂಕಾ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದ ಉತ್ತಮ ಪ್ರದರ್ಶನ ನೀಡಿದ ಅತಿಥೇಯ ಭಾರತ ತಂಡದ ಪ್ರದರ್ಶನ ಮಧ್ಯದಲ್ಲಿ ಮುಸುಕಾಯಿತು.

ಉತ್ತಮ ಆರಂಭ ಪಡೆದ ಆತಿಥೇಯರು 26-6ಪಾಯಿಂಟುಗಳಲ್ಲಿ ಮುನ್ನಡೆ ಹೊಂದಿದ್ದರು. ನಂತರ ಎದುರಾಳಿ ಲಂಕಾ ಒಡ್ಡಿದ ಪ್ರಬಲ ಪೈಪೋಟಿಗೆ ತಕ್ಕಂತೆ ಆಡಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಈ ಪರಿಣಾಮವಾಗಿ ಲಂಕಾ 21-17ರಲ್ಲಿ ಮುನ್ನಡೆ ಸಾಧಿಸಿತು.

ವಿರಾಮದ ನಂತರ ಕೆಲ ಹೊತ್ತಿನಲ್ಲಿಯೇ ಪ್ರಾಬಲ್ಯ ಮೆರೆದ ಭಾರತ ಚುರುಕಿನ ಆಟವಾಡಿ ಎದುರಾಳಿ ತಂಡಕ್ಕೆ ತಿರುಗೇಟು ನೀಡಿತು.  ಈ ಪರಿಣಾಮ ಭಾರತ ಕೊನೆಗೂ ಗೆಲುವು ತನ್ನದಾಗಿಸಿಕೊಂಡಿತು.

ವಿಜಯಿ ತಂಡದ ಪರ ರಾಕೇಶ್ 18 ಹಾಗೂ ಲವನೀತ್ ಸಿಂಗ್ 15 ಪಾಯಿಂಟ್ ಕಲೆ ಹಾಕಿದರು. ಇನ್ನೊಂದು ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ 78-54ರಲ್ಲಿ ನೇಪಾಳ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT