ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ ಸಸ್ಯಕ್ಷೇತ್ರ: ವಿತರಣೆಗೆ ಸಸಿ ಸಿದ್ಧ

Last Updated 3 ಜೂನ್ 2011, 9:50 IST
ಅಕ್ಷರ ಗಾತ್ರ

ಬ್ರಹ್ಮಾವರ: ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ರೈತರು ಸ್ವಂತ ಜಮೀನಿನಲ್ಲಿ ಬೆಳೆಸುವುದಕ್ಕೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಸಸಿ ಒದಗಿಸುತ್ತಿದೆಯಲ್ಲದೇ ಮೂರು ವರ್ಷ ಪ್ರೋತ್ಸಾಹಧನವನ್ನೂ ಒದಗಿಸುತ್ತಿದೆ. ಬ್ರಹ್ಮಾವರ ಸಸ್ಯಕ್ಷೇತ್ರದಲ್ಲಿ ಸಾರ್ವಜನಿಕ ವಿತರಣೆಗೆ ಗಿಡಗಳು ಸಿದ್ಧವಾಗಿದೆ.

`ಬೈಕಾಡಿ ಹೊನ್ನಾಳ ರಸ್ತೆಯಲ್ಲಿ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಪ್ರಸ್ತುತ 34 ಜಾತಿ ಗಿಡಗಳು ಲಭ್ಯ. ಈ ಯೋಜನೆಯನ್ವಯ 5್ಡ8 ಮತ್ತು 6್ಡ9 ಅಳತೆಯ ಪಾಲಿಥೀನ್ ಚೀಲದಲ್ಲಿ ಬೆಳೆದ ಪ್ರತೀ ಸಸಿಗೆ ರೂ.1, 8್ಡ12 ಅಳತೆಯ ಚೀಲದಲ್ಲಿ ಬೆಳೆದ ಸಸಿಗೆ ರೂ. 3ರಂತೆ ಮತ್ತು 10್ಡ16, 14್ಡ20 ಅಳತೆಯ ಚೀಲದಲ್ಲಿ ಬೆಳೆದ ಸಸಿಗೆ ತಲಾ ರೂ. 5ರಂತೆ ವಿತರಿಸಲಾಗುತ್ತದೆ.

ಪ್ರತಿ ಫಲಾನುಭವಿ ಎಷ್ಟು ಗಿಡಗಳನ್ನು ಬೇಕಾದರೂ ತೆಗೆದುಕೊಂಡು ಹೋಗಬಹುದು. ಪ್ರತೀ ಸಸಿಗೆ ಪರಿಗಣಿಸಲಾದ ಸಸಿಗೆ ಮೂರು ವರ್ಷ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಮೊದಲನೆಯ ವರ್ಷ, ಬದುಕುಳಿದ ಸಸಿಗೆ ರೂ.10, ಎರಡನೇ ವರ್ಷದಲ್ಲಿ ರೂ. 15 ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ರೂ. 20 ಹೀಗೆ ಪ್ರತಿ ಗಿಡಕ್ಕೆ ಒಟ್ಟು ರೂ.45ನ್ನು ನೀಡಲಾಗುತ್ತದೆ. ಒಂದು ಹೆಕ್ಟೇರ್‌ನಲ್ಲಿ ನೆಡುವ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹಧನವನ್ನು ನೀಡಲು ಅವಕಾಶವಿದೆ~ ಎಂದು ವನಪಾಲಕ ಪರಮೇಶ್ವರ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಹೇಗೆ ಪಡೆಯಬಹುದು?: `ಎಲ್ಲಾ ಆಸಕ್ತ ರೈತರು, ಸಾರ್ವಜನಿಕರು, ಸಂಘ ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯಲ್ಲಿ ತಮಗೆ ಬೇಕಾದ ಸಸಿಗಳ ಜಾತಿ, ಸಂಖ್ಯೆ ಹಾಗೂ ಅಳತೆಯ ವಿವರಗಳನ್ನು ಮುಂಚಿತವಾಗಿ ಜಿಲ್ಲಾ ಅರಣ್ಯ ಇಲಾಖೆಯ ಕಛೇರಿಯಲ್ಲಿ ನೋಂದಾಯಿಸಬೇಕು. ಮುಂದಿನ ವರ್ಷ ಗಿಡಗಳನ್ನು ನೆಡುವುದಾದಲ್ಲಿ ಅದಕ್ಕೂ ಮುಂಚಿತವಾಗಿ ಅರ್ಜಿಯಲ್ಲಿ ನೋಂದಾಯಿಸಬೇಕು.
 
ಪ್ರತಿ ಮರ ಬೆಳೆಗಾರರು ತಮ್ಮ ಹೆಸರನ್ನು ನೋಂದಾಯಿಸಲು ನೋಂದಣಿ ಶುಲ್ಕ ರೂ. 10 ರೊಂದಿಗೆ  ಜಮೀನಿನ ನಕ್ಷೆ, ಆರ್.ಟಿ.ಸಿ ನಕಲು ಮತ್ತು ಭಾವಚಿತ್ರವನ್ನು ನೀಡಬೇಕಾಗುತ್ತದೆ. ಹೆಸರು ನೋಂದಾಯಿಸಿದ ನಂತರ ರಾಜ್ಯದ ಅರಣ್ಯ ಇಲಾಖೆಯ ಯಾವುದೇ ಸಸ್ಯಕ್ಷೇತ್ರಗಳಿಂದಲೂ ನೋಂದಾಯಿಸಿದ ಸಸಿಗಳನ್ನು ಪಡೆಯಬಹುದು~ ಎಂದರು.

ಲಭ್ಯವಿರುವ ಸಸ್ಯಗಳು:
ಹಲಸು, ಮಾವು, ಪುನರ್‌ಪುಳಿ, ದಾಲ್ಚಿನಿ, ರಾಮಪತ್ರೆ, ಹೊಂಗೆ, ಬೀಟೆ, ಬೈಲುಹೊನ್ನೆ, ಸೀಮಾಕೋಲು ಹೀಗೆ ಮುಂತಾದ 34 ಬಗೆಯ ಸಸಿಗಳಿಗೆ ಪ್ರೋತ್ಸಾಹಧನ ಸಿಗುತ್ತದೆ.
ಪ್ರೋತ್ಸಾಹಧನರಹಿತ ಸಸಿಗಳು: ನೀಲಗಿರಿ ಸಸಿಗಳು, ಅಕೇಶಿಯಾ, ಕಾಫಿ ತೋಟದಲ್ಲಿ ಬೆಳೆಸುವ ಸಿಲ್ವರ್ ಓಕ್, ಗಾಳಿಮರ, ಸೀಮತಂಗಡಿ, ಗ್ಲಿರಿ ಪೀಡಿಯಾ, ಸೆಸ್ ಬೇನಿಯಾ, ಎರಿಥ್ರೀನಾ, ರಬ್ಬರ್, ಸುಬಾಬುಲ್, ತೆಂಗು, ಅಡಿಕೆ, ಕಿತ್ತಳೆ ಹಾಗೂ ಎಲ್ಲಾ ತರಹದ ಸಿಟ್ರಸ್ ತಳಿಗಳು, ಕಸಿ ಮಾಡಲ್ಪಟ್ಟ ಮಾವಿನ ಗಿಡಗಳ ಸಸಿಗಳಿಗೆ ಈ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅವಕಾಶವಿರುವುದಿಲ್ಲ.

ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಎಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದು. ಬ್ರಹ್ಮಾವರ ಪರಿಸರದವರು ದೂ: 9449258721 ಸಂಪರ್ಕಿಸಬಹುದು.

ಬ್ರಹ್ಮಾವರ: ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ರೈತರು ಸ್ವಂತ ಜಮೀನಿನಲ್ಲಿ ಬೆಳೆಸುವುದಕ್ಕೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಸಸಿ ಒದಗಿಸುತ್ತಿದೆಯಲ್ಲದೇ ಮೂರು ವರ್ಷ ಪ್ರೋತ್ಸಾಹಧನವನ್ನೂ ಒದಗಿಸುತ್ತಿದೆ. ಬ್ರಹ್ಮಾವರ ಸಸ್ಯಕ್ಷೇತ್ರದಲ್ಲಿ ಸಾರ್ವಜನಿಕ ವಿತರಣೆಗೆ ಗಿಡಗಳು ಸಿದ್ಧವಾಗಿದೆ.

`ಬೈಕಾಡಿ ಹೊನ್ನಾಳ ರಸ್ತೆಯಲ್ಲಿ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಪ್ರಸ್ತುತ 34 ಜಾತಿ ಗಿಡಗಳು ಲಭ್ಯ. ಈ ಯೋಜನೆಯನ್ವಯ 5್ಡ8 ಮತ್ತು 6್ಡ9 ಅಳತೆಯ ಪಾಲಿಥೀನ್ ಚೀಲದಲ್ಲಿ ಬೆಳೆದ ಪ್ರತೀ ಸಸಿಗೆ ರೂ.1, 8್ಡ12 ಅಳತೆಯ ಚೀಲದಲ್ಲಿ ಬೆಳೆದ ಸಸಿಗೆ ರೂ. 3ರಂತೆ ಮತ್ತು 10್ಡ16, 14್ಡ20 ಅಳತೆಯ ಚೀಲದಲ್ಲಿ ಬೆಳೆದ ಸಸಿಗೆ ತಲಾ ರೂ. 5ರಂತೆ ವಿತರಿಸಲಾಗುತ್ತದೆ. ಪ್ರತಿ ಫಲಾನುಭವಿ ಎಷ್ಟು ಗಿಡಗಳನ್ನು ಬೇಕಾದರೂ ತೆಗೆದುಕೊಂಡು ಹೋಗಬಹುದು.

ಪ್ರತೀ ಸಸಿಗೆ ಪರಿಗಣಿಸಲಾದ ಸಸಿಗೆ ಮೂರು ವರ್ಷ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಮೊದಲನೆಯ ವರ್ಷ, ಬದುಕುಳಿದ ಸಸಿಗೆ ರೂ.10, ಎರಡನೇ ವರ್ಷದಲ್ಲಿ ರೂ. 15 ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ರೂ. 20 ಹೀಗೆ ಪ್ರತಿ ಗಿಡಕ್ಕೆ ಒಟ್ಟು ರೂ.45ನ್ನು ನೀಡಲಾಗುತ್ತದೆ. ಒಂದು ಹೆಕ್ಟೇರ್‌ನಲ್ಲಿ ನೆಡುವ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹಧನವನ್ನು ನೀಡಲು ಅವಕಾಶವಿದೆ~ ಎಂದು ವನಪಾಲಕ ಪರಮೇಶ್ವರ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಹೇಗೆ ಪಡೆಯಬಹುದು?: `ಎಲ್ಲಾ ಆಸಕ್ತ ರೈತರು, ಸಾರ್ವಜನಿಕರು, ಸಂಘ ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯಲ್ಲಿ ತಮಗೆ ಬೇಕಾದ ಸಸಿಗಳ ಜಾತಿ, ಸಂಖ್ಯೆ ಹಾಗೂ ಅಳತೆಯ ವಿವರಗಳನ್ನು ಮುಂಚಿತವಾಗಿ ಜಿಲ್ಲಾ ಅರಣ್ಯ ಇಲಾಖೆಯ ಕಛೇರಿಯಲ್ಲಿ ನೋಂದಾಯಿಸಬೇಕು.

ಮುಂದಿನ ವರ್ಷ ಗಿಡಗಳನ್ನು ನೆಡುವುದಾದಲ್ಲಿ ಅದಕ್ಕೂ ಮುಂಚಿತವಾಗಿ ಅರ್ಜಿಯಲ್ಲಿ ನೋಂದಾಯಿಸಬೇಕು. ಪ್ರತಿ ಮರ ಬೆಳೆಗಾರರು ತಮ್ಮ ಹೆಸರನ್ನು ನೋಂದಾಯಿಸಲು ನೋಂದಣಿ ಶುಲ್ಕ ರೂ. 10 ರೊಂದಿಗೆ  ಜಮೀನಿನ ನಕ್ಷೆ, ಆರ್.ಟಿ.ಸಿ ನಕಲು ಮತ್ತು ಭಾವಚಿತ್ರವನ್ನು ನೀಡಬೇಕಾಗುತ್ತದೆ. ಹೆಸರು ನೋಂದಾಯಿಸಿದ ನಂತರ ರಾಜ್ಯದ ಅರಣ್ಯ ಇಲಾಖೆಯ ಯಾವುದೇ ಸಸ್ಯಕ್ಷೇತ್ರಗಳಿಂದಲೂ ನೋಂದಾಯಿಸಿದ ಸಸಿಗಳನ್ನು ಪಡೆಯಬಹುದು~ ಎಂದರು.

ಲಭ್ಯವಿರುವ ಸಸ್ಯಗಳು: ಹಲಸು, ಮಾವು, ಪುನರ್‌ಪುಳಿ, ದಾಲ್ಚಿನಿ, ರಾಮಪತ್ರೆ, ಹೊಂಗೆ, ಬೀಟೆ, ಬೈಲುಹೊನ್ನೆ, ಸೀಮಾಕೋಲು ಹೀಗೆ ಮುಂತಾದ 34 ಬಗೆಯ ಸಸಿಗಳಿಗೆ ಪ್ರೋತ್ಸಾಹಧನ ಸಿಗುತ್ತದೆ.
ಪ್ರೋತ್ಸಾಹಧನರಹಿತ ಸಸಿಗಳು: ನೀಲಗಿರಿ ಸಸಿಗಳು, ಅಕೇಶಿಯಾ, ಕಾಫಿ ತೋಟದಲ್ಲಿ ಬೆಳೆಸುವ ಸಿಲ್ವರ್ ಓಕ್, ಗಾಳಿಮರ, ಸೀಮತಂಗಡಿ, ಗ್ಲಿರಿ ಪೀಡಿಯಾ, ಸೆಸ್ ಬೇನಿಯಾ, ಎರಿಥ್ರೀನಾ, ರಬ್ಬರ್, ಸುಬಾಬುಲ್, ತೆಂಗು, ಅಡಿಕೆ, ಕಿತ್ತಳೆ ಹಾಗೂ ಎಲ್ಲಾ ತರಹದ ಸಿಟ್ರಸ್ ತಳಿಗಳು, ಕಸಿ ಮಾಡಲ್ಪಟ್ಟ ಮಾವಿನ ಗಿಡಗಳ ಸಸಿಗಳಿಗೆ ಈ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅವಕಾಶವಿರುವುದಿಲ್ಲ.

ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಎಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದು. ಬ್ರಹ್ಮಾವರ ಪರಿಸರದವರು ದೂ: 9449258721 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT