ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾರ್ ಮೇಲಿನ ಹಲ್ಲೆ ಪ್ರಕರಣ:ಇಬ್ಬರ ವಿರುದ್ಧ ಕೊಲೆ ಯತ್ನ ಆರೋಪ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ನಿವೃತ್ತ ಲೆಫ್ಟಿನೆಂಟ್ ಜನರಲ್ ಕುಲದೀಪ್‌ಸಿಂಗ್ ಬ್ರಾರ್ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಲಾಗಿದೆ ಎಂದು ಬ್ರಿಟಿಷ್ ಪೊಲೀಸರು ತಿಳಿಸಿದ್ದಾರೆ. ವಾಲ್ವೆರ್‌ಹ್ಯಾಪ್ಟಂನ್ ನಿವಾಸಿ ಬ್ರಿಜಿಂದರ್ ಸಿಂಗ್ ಸಂಘ (33) ಮತ್ತು ಬರ್ಮಿಂಗ್‌ಹ್ಯಾಮ್‌ನ ಮನದೀಪ್ ಸಿಂಗ್ ಸಂಧು (34) ಈ ಪ್ರಕರಣದ ಆರೋಪಿಗಳು.
 
`ಇವರಿಬ್ಬರನ್ನು ಸೋಮವಾರ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ~ ಎಂದು ಮೆಟ್ರೊ ಪಾಲಿಟನ್ ಪೊಲೀಸರು ತಿಳಿಸಿದ್ದಾರೆ.`ಬ್ರಾರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಈ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಲದೀಪ್ ಸಿಂಗ್ ಪತ್ನಿ ಮೀನಾ ಬ್ರಾರ್ ಅವರ ಮೇಲೂ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ~ ಎಂದು ಪೊಲೀಸರು ವಿವರಿಸಿದ್ದಾರೆ.

ಭಾರತದ ನಿವೃತ್ತ ಲೆಫ್ಟಿನೆಂಟ್ ಜನರಲ್ ಕುಲದೀಪ್‌ಸಿಂಗ್ ಬ್ರಾರ್ ಮತ್ತು ಪತ್ನಿ ಮೀನಾ ಅವರ ಮೇಲೆ ಇತ್ತೀಚೆಗೆ ಇಲ್ಲಿನ ಓಲ್ಡ್ ಕ್ಯೂಬೆಕ್ ರಸ್ತೆಯಲ್ಲಿ ಹೋಟೆಲ್‌ವೊಂದರಿಂದ ಹೊರ ಬರುತ್ತಿದ್ದ ವೇಳೆ ಹತ್ಯೆ ಯತ್ನ ನಡೆದಿತ್ತು. 1984ರ `ಆಪರೇಷನ್ ಬ್ಲೂಸ್ಟಾರ್~ನ ರೂವಾರಿಯಾಗಿದ್ದ ಇವರ ಮೇಲೆ ಖಾಲಿಸ್ತಾನಿ ಪರ ವಾದಿಗಳು ಹಲ್ಲೆ ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಹಲ್ಲೆ ನಡೆದಾಗ ಬ್ರಾರ್ ಅವರ ಕುತ್ತಿಗೆ ಮತ್ತು ಗಲ್ಲಕ್ಕೆ ಗಾಯವಾಗಿತ್ತು. ಪತ್ನಿ ಮೀರಾ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಹನ್ನೆರಡು ಮಂದಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು.

ಬಂಧಿತರಲ್ಲಿ 10 ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ವಲಸಿಗರನ್ನು ಪೊಲೀಸರು ಬಂಧಿಸಿದದ್ದು, ಅವರನ್ನು ಬ್ರಿಟನ್ ಬಾರ್ಡ್‌ರ್ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT