ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಕ್ ದೇಶಗಳ ನಡುವೆ ಇನ್ನಷ್ಟು ಸಹಕಾರ: ಸಿಂಗ್

Last Updated 13 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಜಾಗತಿಕ ಆರ್ಥಿಕತೆ, ಪ್ರಜಾಪ್ರಭುತ್ವ, ಜಾಗತಿಕ ಸಮಾನತೆ, ಆಡಳಿತ ಸುಧಾರಣೆಯಂತಹ ಸರ್ವೇಸಾಮಾನ್ಯ ವಿಚಾರಗಳಲ್ಲಿ ‘ಬ್ರಿಕ್’ ದೇಶಗಳು ತಮ್ಮ ಬಲವನ್ನು ಒಟ್ಟುಗೂಡಿಸಿಕೊಂಡು ಸಹಕಾರವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.‘ಬ್ರೆಜಿಲ್, ರಷ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನು (ಬ್ರಿಕ್ಸ್) ಒಳಗೊಂಡ ಈ ರಾಷ್ಟ್ರಗಳ ಒಕ್ಕೂಟವು ತನ್ನ ಜನತೆಯ ಆರ್ಥಿಕ ಶಕ್ತಿಯ ಪುನಶ್ಚೇತನಕ್ಕಾಗಿ ಶ್ರಮಿಸಬೇಕು. ಬೃಹತ್ ನಗರಗಳ ನಿರ್ವಹಣೆ ವಿಚಾರದಲ್ಲಿ ಅನುಭವ ಹಂಚಿಕೆ ಸಹಿತ ಹಲವಾರು ವಿಚಾರಗಳಲ್ಲಿ ಈ ದೇಶಗಳ ನಡುವೆ ಸಹಕಾರ ಸಾಧಿಸುವುದು ಸಾಧ್ಯವಿದೆ ಎಂದು ಅವರು ಕ್ಸಿನ್‌ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
 

‘ಬ್ರಿಕ್ಸ್’ ರಾಷ್ಟ್ರಗಳ ಕೂಟದಲ್ಲಿ ದಕ್ಷಿಣ ಆಫ್ರಿಕಾ ಸೇರಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ಆಫ್ರಿಕಾದ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸುವುದು ಇದರಿಂದ ಸಾಧ್ಯವಾಗುತ್ತದೆ. ಬ್ರಿಕ್ ಶೃಂಗ ಸಭೆ ಇದೇ ಪ್ರಥಮ ಬಾರಿಗೆ ಏಷ್ಯಾ ಖಂಡದಲ್ಲಿ ನಡೆಯುತ್ತಿರುವುದೂ ಉತ್ತೇಜಕಾರಿ ಅಂಶ’ ಎಂದು ಪ್ರಧಾನಿ ಹೇಳಿದ್ದಾರೆ.
 

ಚೀನಾದೊಂದಿಗಿನ ಸಹಕಾರದ ಬಗ್ಗೆ ಅವರು ಪ್ರಸ್ತಾಪಿಸಿ, ಭಾರತ ಮತ್ತು ಚೀನಾಗಳು ಜಾಗತಿಕ ಆರ್ಥಿಕತೆಯ ಎರಡು ಎಂಜಿನ್‌ಗಳು, ಸರ್ವಾಂಗೀಣ, ಸುಸ್ಥಿರವಾದ ಜಾಗತಿಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಹೊಣೆಗಾರಿಕೆ ಈ ಎರಡು ದೇಶಗಳ ಮೇಲೆ ಇದೆ, ಇದಕ್ಕೆ ತಕ್ಕಂತೆ ಇವುಗಳು ಪರಸ್ಪರ ಸಹಕಾರದಿಂದ ಮುಂದುವರಿಯಬೇಕಾಗಿದೆ ಎಂದರು.
 

ಬ್ರಿಕ್ಸ್ ಸಚಿವರ ಸಭೆ: ಈ ಮಧ್ಯೆ, ಚೀನಾದ ಸನ್ಯಾ ನಗರದಲ್ಲಿ ‘ಬ್ರಿಕ್ಸ್’ ಒಕ್ಕೂಟದ ಐವರು ವಾಣಿಜ್ಯ ಸಚಿವರು ಸಭೆ ನಡೆಸಿದರು. ‘ಬ್ರಿಕ್ಸ್’ ಶೃಂಗಸಭೆ ಗುರುವಾರ ನಡೆಯುತ್ತಿರುವುದಕ್ಕೆ ಪೂರ್ವಭಾವಿಯಾಗಿ ಈ ಸಭೆ ನಡೆದಿದೆ.  ಈ ಸಭೆಯಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಪಾಲ್ಗೊಂಡಿದ್ದರು. ಬಹುಪಕ್ಷೀಯ ಸಹಕಾರದ ಸನ್ನಿವೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹಿತ ಕಾಪಾಡುವುದು ಹೇಗೆ ಎಂಬ ಬಗ್ಗೆ ಸಚಿವರು ಚರ್ಚಿಸಿದರು.
 

‘ಬ್ರಿಕ್’ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲ

ಬೀಜಿಂಗ್ (ಪಿಟಿಐ): ‘ಬ್ರಿಕ್’ ದೇಶಗಳು ಖಂಡಿತ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲ, ಅವುಗಳೆಲ್ಲ ಜಾಗತಿಕ ಆರ್ಥಿಕತೆಯ ಪಾಲಿಗೆ ಪ್ರಗತಿ ಹೊಂದಿದ ಮಾರುಕಟ್ಟೆಗಳಾಗಿಬಿಟ್ಟಿವೆ ಎಂದು ಗೋಲ್ಡ್‌ಮನ್ ಸಚ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಜಿಮ್ ಒನಿಲ್ ಹೇಳಿದ್ದಾರೆ.
 

‘ಭಾರತ, ರಷ್ಯ, ಬ್ರೆಜಿಲ್, ಚೀನಾದ ಮಾರುಕಟ್ಟೆಗಳನ್ನು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಎಂದು ಹೇಳಿದರೆ ಅದೊಂದು ಅವಮಾನ. ಈ ನಾಲ್ಕು ದೇಶಗಳ ಆರ್ಥಿಕತೆ ಇಂದು ಜಾಗತಿಕ ಆರ್ಥಿಕತೆಯಲ್ಲಿ ಬಹಳ ಪ್ರಭಾವ ಬೀರುತ್ತಿವೆ’ ಎಂದು ಹತ್ತು ವರ್ಷಗಳ ಹಿಂದೆ ‘ಎಮರ್ಜಿಂಗ್ ಎಕಾನಮಿ’ ಎಂಬ ಪದವನ್ನು ಹುಟ್ಟು ಹಾಕಿದ್ದ ಅವರು ‘ಚೀನಾ ಡೈಲಿ’ ಪತ್ರಿಕೆಗೆ ತಿಳಿಸಿದ್ದಾರೆ.

ಸಿಂಗ್-ಮೆಡ್ವಡೇವ್  ಚರ್ಚೆ

ಸನ್ಯಾ (ಚೀನಾ) (ಪಿಟಿಐ): ಕೇವಲ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಪರಸ್ಪರ ಭೇಟಿಯಾಗಿ ಚರ್ಚಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಷ್ಯದ ಅಧ್ಯಕ್ಷ ಡಿಮಿಟ್ರಿ ಮೆಡ್ವಡೇವ್, ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ, ಆರ್ಥಿಕತೆ ಸಹಿತ ಹಲವು ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

‘ಬ್ರಿಕ್ಸ್’ ಶೃಂಗ ಸಭೆಗೆ ಪೂರ್ವಭಾವಿಯಾಗಿ ಬುಧವಾರ ಇಲ್ಲಿ ಉಭಯ ನಾಯಕರು ಜಾಗತಿಕ ಸನ್ನಿವೇಶಗಳಿಂದ ತಮ್ಮ ದೇಶಗಳಿಗೆ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಿದರು.
ಭಾರತ ಮತ್ತು ರಷ್ಯ ನಡುವೆ ವಿಶಿಷ್ಟವಾದ ರಕ್ಷಣಾ ಪಾಲುದಾರಿಕೆ ಇದೆ ಎಂದರು.

 ಇದೆ . ಈ ಪಾಲುದಾರಿಕೆ ಇದೀಗ ದಶಕ ಪೂರೈಸಿದೆ. ಇದೊಂದು ಸಂಭ್ರಮಿಸಬೇಕಾದ ಕ್ಷಣ’ ಎಂದು ಪ್ರಧಾನಿ ಸಿಂಗ್ ಅವರು ನುಡಿದರು. ಮೆಡ್ವೆಡೇವ್ ಅವರು ಕಳೆದ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT