ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ರಾಣಿ ಅರಮನೆಗೆ ಅಕ್ರಮ ಪ್ರವೇಶ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ದಶಕಗಳಿಂದ ವಿಶೇಷ ಭದ್ರತೆಯನ್ನು ಹೊಂದಿರುವ ಬ್ರಿಟನ್ ರಾಜಮನೆತನದ ಅಧಿಕೃತ ನಿವಾಸವಾದ ಬಕಿಂಗ್‌ಹ್ಯಾಮ್ ಅರಮನೆಗೆ ಅತಿಕ್ರಮಣವಾಗಿ ಪ್ರವೇಶಿಸಿ ಕಳ್ಳತನ ಮಾಡಿರುವ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳರು ಸೋಮವಾರ ರಾತ್ರಿ ಮೂರು ಹಂತದ ಭದ್ರತಾ ವ್ಯವಸ್ಥೆಯ ಕಣ್ತಪ್ಪಿಸಿ, ಅರಮನೆ ಗೋಡೆ ಹತ್ತಿ, ಬಾಗಿಲು ಒಡೆದು ಒಳನುಗ್ಗಿ ಕಳ್ಳತನ ಮಾಡಿರುವುದಾಗಿ ಬ್ರಿಟಿಷ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಒಬ್ಬ ಅದೇ ಪ್ರದೇಶದಲ್ಲಿ ಸಾರ್ವಜನಿಕರ ಮಧ್ಯೆ ಪತ್ತೆಯಾಗಿದ್ದು, ಆತನನ್ನು ಅತಿಕ್ರಮ ಪ್ರವೇಶ, ಕಳ್ಳತನ ಹಾಗೂ ಅಪರಾಧ ಪ್ರಕರಣ ಆರೋಪದಡಿ ಬಂಧಿಸಲಾಗಿದೆ. ಇನ್ನೊಬ್ಬನನ್ನು ಅರಮನೆಯ ಹೊರಭಾಗದಲ್ಲಿ ಕಳ್ಳತನಕ್ಕೆ ಸಹಕರಿಸಿದ ಆರೋಪದಡಿ ಬಂಧಿಸಲಾಗಿದೆ. ಸದ್ಯಕ್ಕೆ ಇಬ್ಬರೂ ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಣಿಯವರು ಜೂನ್‌ನಿಂದ ಅಕ್ಟೋಬರ್ ತನಕ ಬಲ್‌ಮೊರಲ್‌ನ ಶ್ರೀಮಂತ ಗೃಹದಲ್ಲಿ ಕಾಲಕಳೆಯುವುದರಿಂದ, ಘಟನೆ ನಡೆದಾಗ ಅರಮನೆಯಲ್ಲಿ ಯಾರೂ ಇರಲಿಲ್ಲ. 1982ರಲ್ಲಿ ರಾಣಿಯ ಕೊಠಡಿಗೆ ಕಳ್ಳತನ ಮಾಡಲು ಮೈಕೆಲ್ ಫಾಗನ್ ಎಂಬಾತ ನುಗ್ಗಿದಾಗ, ರಾಣಿ ತಕ್ಷಣ ಎಚ್ಚರಿಕೆ ಗಂಟೆ ಬಾರಿಸಿದ್ದರು. ಆಗ ಆತನನ್ನು ಬಂಧಿಸಲಾಗಿತ್ತು. ಅರಮನೆಯು ಭವ್ಯ ಕಲಾಕೃತಿಗಳು, ಮೂರ್ತಿಗಳು ಹಾಗೂ ಪ್ರಾಚೀನ ಪೀಠೋಪಕರಣಗಳಿಂದ ಕೂಡಿದ್ದು, ರಾಜವಂಶದ ಆಡಳಿತ ಕೇಂದ್ರವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT