ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಬದುಕಿನಲ್ಲಿ ಬೆಳಕು ಮೂಡಿಸಿದ ಶ್ರೀ

Last Updated 3 ಸೆಪ್ಟೆಂಬರ್ 2011, 5:40 IST
ಅಕ್ಷರ ಗಾತ್ರ

ಅಕ್ಕಿಆಲೂರ: ವಿಶ್ವಮಟ್ಟದಲ್ಲಿ ಕನ್ನಡ ನಾಡು ಕಂಗೊಳಿಸುವಂತೆ ಮಾಡಿದವರು ಬಸವಾದಿ ಶಿವಶರಣರು. ಅವರ ಭಕ್ತಿ, ಕಾಯಕ, ದಾಸೋಹ, ಸಮಾ ನತೆಗಳ ಮೌಲಿಕ ತತ್ವಗಳ ಮೇಲೆ ಸಮಾಜ ಕಟ್ಟಿದ ಶ್ರೇಯಸ್ಸು ಮಠಾಧೀಶರಿಗೆ ಸಲ್ಲಬೇಕು. ಮಠಗಳ ಹಾಗೂ ಮಠಾಧೀಶರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಅನುಪಮವಾದುದಾಗಿದೆ.

ಇಂತಹ ಸಾಮಾಜಿಕ ಹಿನ್ನೆಲೆಯ ವಿಶಿಷ್ಟ ಮಾಲಿಕೆಯಲ್ಲಿ ಇಲ್ಲಿಗೆ ಸಮೀಪವಿರುವ ಮೂಡಿ ಹಾಗೂ ಹಳ್ಳಿಬೈಲು ಗ್ರಾಮಗಳಲ್ಲಿರುವ ಶಿವಲಿಂಗೇಶ್ವರ ಮಠಗಳೂ ಸೇರಲಿವೆ. ಕಾರಣಿಕ ಯುಗ ಪುರುಷ ಲಿಂ.ಹಾನಗಲ್ಲ ಕುಮಾರ ಶ್ರೀಗಳ ಸದಾಶಯದಲ್ಲಿ ಮುನ್ನೆಡೆದ ಪುಣ್ಯಧಾಮ ಎಂಬ ಹಿರಿಮೆಯೂ ಈ ಮಠಗಳಿಗಿದೆ. ಇಂತಹ ವಿಶೇಷ ಐತಿ ಹಾಸಿಕ ಹಿನ್ನೆಲೆಯ ಮಠಗಳ ಪೀಠಾ ಧ್ಯಕ್ಷರಾಗಿದ್ದ ಚನ್ನವೀರ ಶ್ರೀಗಳು ಶಿವ ಯೋಗ ಸಂಪನ್ನರು. ಸಮಾಜವನ್ನು ಕಟ್ಟಿ ಬೆಳೆಸಿದ ಕೀರ್ತಿಕಾಯರು. ಬದುಕಿನುದ್ದಕ್ಕೂ ಕುಮಾರೇಶ್ವರ ನಾಮವನ್ನು ಮಂತ್ರವಾಗಿಸಿಕೊಂಡು ಭಕ್ತರ ಮನೆ, ಮನವನ್ನು ಬೆಳಗಿಸಿದ ಪುಣ್ಯ ಪುರು ಷರು. ಇಂತಹ ಪೂಜ್ಯರು ಈಚೆಗೆ ಲಿಂಗೈಕ್ಯರಾಗಿರುವುದು ಭಕ್ತ ಸಮು ದಾಯದಲ್ಲಿ ಅಪಾರ ನೋವುಂಟು ಮಾಡಿದ್ದು ಆ ಮೂಲಕ ನಾಡಿನ ಧಾರ್ಮಿಕ ಕ್ಷೇತ್ರದ ಹಿರಿಯ ಚೇತನರನ್ನು ಕಳೆದುಕೊಂಡಂತಾಗಿದೆ.

ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಅರಳೀಹಳ್ಳಿಯಲ್ಲಿ 1925 ರಲ್ಲಿ ಪರಮಶಿವಯ್ಯ ಹಾಗೂ ಪಾರ್ವತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಚನ್ನವೀರ ಶ್ರೀಗಳ ಜನ್ಮನಾಮ ಶಾಂತವೀರ.  ಹುಟ್ಟಿದ ಕೇವಲ ಒಂದು ವರ್ಷದಲ್ಲಿಯೇ ತಂದೆಯನ್ನು ಕಳೆದುಕೊಂಡ ಶಾಂತವೀರರು ಆ ಬಳಿಕ ತಾಯಿಯ ಪ್ರೀತಿ, ವಾತ್ಸಲ್ಯದಲ್ಲಿ ಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ತಾಯಿಯ ಇಚ್ಛೆ ಯಂತೆ ಗಂಗಾವತಿಯ ಚನ್ನಬಸವ ಶಿವ ಯೋಗಿಗಳ ಸನ್ನಿಧಿಗೆ ತೆರಳಿ ಧಾರ್ಮಿಕ ಕ್ಷೇತ್ರದತ್ತ ಆಕರ್ಷಣೆ ಯನ್ನು ಬೆಳೆಸಿಕೊಂಡರು.

ಬಡತನದಲ್ಲಿ ಬೇಯುತ್ತಿದ್ದ ತಾಯಿಯ ಸ್ಥಿತಿಯನ್ನು ಕಂಡು ಮರಗಿ ತಾಯಿ ಸೇವೆ ಮಾಡಲು ತಮ್ಮ ಸ್ವಗ್ರಾಮಕ್ಕೆ ಮರಳಿ ಶಿಕ್ಷಕ ವೃತ್ತಿಯಲ್ಲಿ ನಿರತರಾದರು. ಚಿದಾನಂದ ಅವ ಧೂತರ “ಜ್ಞಾನಸಿಂಧು~, ನಿಜಗುಣರ `ಷಟಶಾಸ್ತ್ರ~ಗಳಿಂದ ಪ್ರಭಾವಿತರಾಗಿ ರೋಣ ತಾಲ್ಲೂಕಿನ ಹಾಲಕೆರೆಗೆ ಬಂದು ಅನ್ನದಾನೀಶ್ವರ ಶಿವಯೋಗಿಗಳ ಸೇವೆಗೆ ನಿಂತರು. ಚಿನ್ಮಯಿ ಧೀಕ್ಷೆ ಪಡೆದು ಕಾವಿ ಧರಿಸಿದರು. ಗುರುವಿನ ಅಣತಿಯಂತೆ ಆಧ್ಯಾತ್ಮಿಕ ಕೇಂದ್ರ ಚಿಕ್ಕಮಗಳೂರು ಜಿಲ್ಲೆಯ ಗಿರಿಯಾ ಪುರಕ್ಕೆ ತೆರಳಿ ಹೆಚ್ಚಿನ ಜ್ಞಾನಾರ್ಜನೆ ಯಲ್ಲಿ ತೊಡಗಿದರು.

ಬಸವಣ್ಣನವರ ಕಾಯಕ ಹಾಗೂ ಅನ್ನದಾಸೋಹದ ಜೊತೆಜೊತೆಗೆ ಬದುಕು ಬೆಳಗಲು ಶಿಕ್ಷಣ ಎಂಬ ಕಿರಣದ ಅವಶ್ಯಕತೆಯನ್ನು ಮನಗಂಡು ಅಕ್ಷರ ದಾಸೋಹ ಆರಂಭಿಸಿ ಆ ಮೂಲಕ ಗ್ರಾಮೀಣ ಭಾಗದ ಸಹಸ್ರಾರು ಯುವಕರು ಸುಶಿಕ್ಷಿತರಾಗುವಂತೆ ಮಾಡಿದ ಮಹಾಮಹಿಮರೆನಿಸಿಕೊಂಡ ಚನ್ನವೀರ ಶ್ರೀಗಳು ಈಚೆಗೆ ಲಿಂಗದಲ್ಲಿ ಒಂದಾಗುವ ಮೂಲಕ ನಾಡು ಸಾಧನೆಯ ಸಿದ್ಧಿ ಪುರುಷ ರೋರ್ವರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳು ಗಿದೆ. ಶ್ರೀಗಳ ಕಾಯ ಲಿಂಗದಲ್ಲಿ ಒಂದಾಗಿದ್ದರೂ ಅವರ ಕಾಯಕ, ಸೇವೆಗಳು ಎಂದಿಗೂ ಅವಿಸ್ಮರಣೀಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT