ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಭಾವದೊಂದಿಗೆ ಮಹಾರುದ್ರಯಾಗ ಪ್ರಾರಂಭ

Last Updated 13 ಏಪ್ರಿಲ್ 2013, 10:51 IST
ಅಕ್ಷರ ಗಾತ್ರ

ಯಾದಗಿರಿ: ಗುರುವಾರ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವ ಸುಕ್ಷೇತ್ರ ಅಬ್ಬೆತುಮಕೂರ ಸಿದ್ಧಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಡಾ.ಗಂಗಾಧರ ಮಹಾಸ್ವಾಮಿಗಳ ನೇತತ್ವದಲ್ಲಿ ಹಮ್ಮಿಕೊಂಡಿದ ಮಹಾರುದ್ರಯಾಗ ಭಕ್ತಿ ಭಾವದೊಂದಿಗೆ ಪ್ರಾರಂಭಗೊಂಡಿತು.

ಬೆಳಿಗ್ಗೆ ಶ್ರೀಶೈಲದ ಚಂದ್ರಶೇಖರ ಸ್ವಾಮಿಗಳ ಶಿಷ್ಯವಂದ 60ಕ್ಕೂ ಹೆಚ್ಚಿನ ವೈದಿಕ ತಂಡ ಮಹಾರುದ್ರ ಯಾಗಕ್ಕೆ ಮಠದ ಆವರಣದಲ್ಲಿ ಎಲ್ಲಾ ಸಿದ್ದತೆಗಳನ್ನು ಪೂರೈಸಿತ್ತು. ಉಜ್ಜನಿಯ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿ ಚಾಲನೆ ನೀಡಿದರು. ಈ ಯಾಗದಲ್ಲಿ 11 ಅಗ್ನಿ ಕುಂಡದ ಸುತ್ತ ಒಟ್ಟು 88 ಜೋಡಿ ದಂಪತಿ ಭಕ್ತರು ಕುಳಿತುಕೊಂಡು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ಮಹಾರುದ್ರಯಾಗದ ಋತ್ವಿಜರು ಗಂಗಾಪೂಜೆ, ಅಖಂಡ ಧರ್ಮ ದೀಪ ಪ್ರಜ್ವಲನಾ, ಗೌರಿ ಗಣಪತಿ ಪೂಜೆ, ರಕ್ಷಾ ಕಂಕಣ ಧಾರಣೆ, , ಏಕಾದಶ ರುದ್ರ, ಕಲಶ ಪೂಜೆ, ಮಹಾ ರುದ್ರಾಭಿಷೇಕ ನೇರವೆರಿಸಿ ಮಹಾ ಮಂಗಳಾರತಿ ನಡೆಯಿತು.ಈ ಯಾಗವು ಶುಕ್ರವಾರ ಹಾಗೂ ಶನಿವಾರ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT