ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆ ಇವರಿಗೆ ಬೇಕು

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಬೋಧಿಸುವಂತಿಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿರುವಾಗ  ಶಾಲಾ ಮಕ್ಕಳಿಗೆ ಭಗವದ್ಗೀತೆ ಕಂಠಪಾಠ ಮಾಡಿಸುವ  ಮುಖ್ಯಮಂತ್ರಿಗಳ ಆಶಯಕ್ಕೆ ಅರ್ಥವೇ ಇಲ್ಲ.

ಇಷ್ಟಕ್ಕೂ ಭಗವದ್ಗೀತೆಯ ಅಧ್ಯಯನದ ಅಗತ್ಯ ಇರುವುದು ದೊಡ್ಡವರಿಗೆ. ಅವರ ಕೊಳಕು ಮನಸ್ಸುಗಳಿಗೆ ಭಗವದ್ಗೀತೆ ಮಾರ್ಜಕ.

ಜಾತಿ- ಜಾತಿ ಎಂದು ಬಡಿದಾಡುವವರಿಗೆ, ಅನಿಷ್ಟ ಆಚರಣೆಗಳನ್ನು ಪ್ರೋತ್ಸಾಹಿಸುವವರಿಗೆ, ಅಸ್ಪೃಶ್ಯತೆ ಆಚರಿಸುವವರಿಗೆ, ಸಂಬಳ ಪಡೆದು ಕೆಲಸ ಮಾಡದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ, ಜನಸೇವೆ ಮರೆತು ಹಣ ಗಳಿಕೆಯಲ್ಲೇ ತೊಡಗಿರುವ ಚುನಾಯಿತ ಪ್ರತಿನಿಧಿಗಳಿಗೆ ಭಗವದ್ಗೀತೆಯ ಅಗತ್ಯವಿದೆ.

ಅಷ್ಟೇ ಅಲ್ಲ, ರೈತರನ್ನು ಶೋಷಣೆ ಮಾಡುವವರಿಗೆ, ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರಿಗೆ, ಭ್ರಷ್ಟ ರಾಜಕಾರಣಿಗಳಿಗೆ ಭಗವದ್ಗೀತೆಯ ಅಧ್ಯಯನದ ಅಗತ್ಯವಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಮೇಲೆ ಪ್ರಸ್ತಾಪಿಸಿದ ವ್ಯಕ್ತಿಗಳಿಗೆ ಭಗವದ್ಗೀತೆ ವಾಚನಕ್ಕೆ ವ್ಯವಸ್ಥೆ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT