ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಗಿರಿ ಕೇಶವದಾಸರ 15ನೇ ವರ್ಷದ ಪುಣ್ಯಾರಾಧನೆ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಸಂತ ಭದ್ರಗಿರಿ ಶ್ರೀ ಕೇಶವ ದಾಸರ 15ನೇ ಪುಣ್ಯಾರಾಧನಾ ಮಹೋತ್ಸವ ಶನಿವಾರದಿಂದ ಪ್ರಾರಂಭವಾಗುತ್ತಿದ್ದು,  ಸೋಮವಾರದವರೆಗೆ (ಡಿ.15ರಿಂದ 17) ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶನಿವಾರ ಬೆಳಿಗ್ಗೆ 10.30ಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಶಾಖಾ ಮಠವಾದ ರಾಮನಗರದ ಅಂಧ ಶಾಲಾ ಮಕ್ಕಳಿಂದ ಭಜನೆ. ಮಧ್ಯಾಹ್ನ 12ಕ್ಕೆ ಆಶ್ರಮದ ಅಧ್ಯಕ್ಷೆ ರಮಾ ಕೇಶವದಾಸರಿಂದ 50 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಮತ್ತು ಅಂಧ ಮಕ್ಕಳಿಗೆ ವಸ್ತ್ರವಿತರಣೆ. 1.30ಕ್ಕೆ ಮಹಾಮಂಗಳಾರತಿ ಅನ್ನಸಂತರ್ಪಣೆ, ಸಂಜೆ 4ಕ್ಕೆ ವಿದ್ವಾನ್ ಪುತ್ತೂರು ನರಸಿಂಹನಾಯಕ್ ಅವರಿಂದ `ಭಕ್ತಿ ಸಂಗೀತ' ಕಾರ್ಯಕ್ರಮ.

ಭಾನುವಾರ ಬೆಳಿಗ್ಗೆ 5.30ಕ್ಕೆ ಭದ್ರಾವತಿಯ ಗೋಂಧಿ ಸಂಸ್ಥಾನದ ಶ್ರೀನಾಮದೇವಾನಂದ ಭಾರತಿ ಸ್ವಾಮೀಜಿ, ಕನ್ನಮಂಗಲದ ವಿಠ್ಠಲ ವಿಹಾರ ಚಾರಿಟಬಲ್ ಟ್ರಸ್ಟ್‌ನ ಕೋಸು ಸಂಪುಟಾಣಿ, ಅಮ್ಮನಗುಡ್ಡದ ಶ್ರೀನರಸಿಂಹಮೂರ್ತಿ ಸ್ವಾಮೀಜಿ ಅವರಿಂದ ಭಜನೆ, ಕಾಕಡಾರತಿ, ಸಾಮೂಹಿಕ ಪಂಡರಿ ಭಜನೆ, 10ಕ್ಕೆ ಹರಿದಾಸ ಸಂಘದಿಂದ `ಹರಿನಾಮ ಸಂಕೀರ್ತನೆ', 10.30ಕ್ಕೆ ವಿಶ್ವರೂಪ ವಿಜಯ ವಿಠ್ಠಲ ದೇವರಿಗೆ `ಮಹಾ ಕುಂಬಾಭಿಷೇಕ', 12.30ಕ್ಕೆ ಸಿ.ಬಿ.ವಿಶ್ವನಾಥ್ ನೇತೃತ್ವದಲ್ಲಿ ಶ್ರೀವೀರಭದ್ರಸ್ವಾಮಿ ಜನಪದ ಕಲಾ ತಂಡದಿಂದ ಡೊಳ್ಳುಕುಣಿತ ಹಾಗು ವಿವಿಧ ವಾದ್ಯಗಳೊಂದಿಗೆ ಅರಿಶಿನಕುಂಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ `ಪುಷ್ಪ ರಥೋತ್ಸವ'. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ಅನ್ನಸಂತರ್ಪಣೆ, ಸಂಜೆ 4ಕ್ಕೆ ರಾಮಕೃಷ್ಣ ಸತ್ಸಂಗ ಕೇಂದ್ರದ ವಿದ್ವಾನ್ ಕೆ.ಗುರುರಾಜ್ ಅವರಿಂದ ಭಜನೆ.

ಭಾನುವಾರ ಬೆಳಿಗ್ಗೆ 10.30ಕ್ಕೆ ಗುರುಪೂಜೆ, 11ಕ್ಕೆ ಆಶ್ರಮದ ಗೌರವ ಕಾರ್ಯಾಧ್ಯಕ್ಷ ಸಂತ ಭದ್ರಗಿರಿ ಕೇಶವದಾಸರು ಮತ್ತು ಕಾರ್ಯದರ್ಶಿ ಸಂತ ಭದ್ರಗಿರಿ ಸರ್ವೋತ್ತಮದಾಸರಿಂದ ಆಶೀರ್ವಚನ. ಮಧ್ಯಾಹ್ನ 12.30ಕ್ಕೆ ದಾಸ ಕೀರ್ತನಾ ಮಂಡಳಿಯ ಕೇಶವ ಭಗಿನಿ ಅವರಿಂದ ಭಜನೆ. 1.30ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ.

ಸ್ಥಳ: ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಬೈಪಾಸ್ ಬಳಿ (ಬೆಂಗಳೂರಿನಿಂದ 24 ಕಿ.ಮೀ) ಇದೆ ವಿಶ್ವಶಾಂತಿ ಆಶ್ರಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT