ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ನಿಧಿ ವಂಚನೆ ಬಯಲು: ಪೊಲೀಸರೇ ಆರೋಪಿಗಳು

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ 9/11ರ ಭಯೋತ್ಪಾದನಾ ದಾಳಿಯ ಸಂತ್ರಸ್ತರಿಗೆ ಮೀಸ­­ಲಾಗಿರಿಸಿದ್ದ ಲಕ್ಷಾಂತರ ಡಾಲರ್‌ ನಿಧಿ­ಯನ್ನು ನ್ಯೂಯಾ­­ರ್ಕ್‌ನ ಮಾಜಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹಲವರು ತಮ್ಮ ಐಷಾರಾಮಿ ಜೀವ­ನಕ್ಕೆ ಬಳಸಿ­ಕೊಂಡು ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಮ್ಯಾನ್‌ಹಟನ್‌ನ ಜಿಲ್ಲಾ ಅಟಾರ್ನಿ ಅವರ ಕಚೇರಿ ಮಂಗಳ­ವಾರ ಬಿಡುಗಡೆ ಮಾಡಿರುವ ಆರೋ­ಪಿ­ಗಳ ಪಟ್ಟಿಯಲ್ಲಿ 106 ಜನರನ್ನು ಹೆಸರಿಸಲಾಗಿದೆ. ಇದರಲ್ಲಿ ನ್ಯೂಯಾ­ರ್ಕ್‌ನ ಮಾಜಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ. ಇವರಲ್ಲಿ ನಾಲ್ವರ ವಿರುದ್ಧ ಭಾರಿ ವಂಚನೆ ಎಸಗಿದ ಆರೋಪ ಹೊರಿಸಲಾಗಿದೆ.

ವಂಚಕರ ತಂಡದ ನೇತೃತ್ವವನ್ನು 83 ವರ್ಷದ ರೇಮಂಡ್‌ ಲ್ಯಾವೆಲ್ಲೆ ಎಂಬಾತ  ಹೊತ್ತಿದ್ದ. ಮೂಲತಃ ವಕೀಲನಾಗಿದ್ದ ರೇಮಂಡ್‌, ಎಫ್‌ಬಿ­ಐಯ ಏಜೆಂಟ್‌ ಆಗಿ ವೃತ್ತಿ ಆರಂಭಿ­ಸಿದ್ದ. ನಸ್ಸಾವು ಕೌಂಟಿಯ ಹಿರಿಯ ಪ್ರಾಸಿಕ್ಯೂಟರ್‌ ಆಗಿಯೂ ಕಾರ್ಯನಿ­ರ್ವ­ಹಿಸಿದ್ದ ಎಂದು ಹೇಳಿಕೆ ತಿಳಿಸಿದೆ.

ಪಿಂಚಣಿ ಸಲಹೆಗಾರನಾಗಿದ್ದ ಥಾಮಸ್‌ ಹಾಲೆ (89) ಮತ್ತು ಮಾಜಿ ಪೊಲೀಸ್‌ ಅಧಿಕಾರಿ ಜೋಸೆಫ್‌ ಮಿನರ್ವಾ (61)  ಅವರೊಂದಿಗೆ ಸೇರಿ ಲ್ಯಾವೆಲ್ಲಾ ಈ ವಂಚನೆ ಎಸಗಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಗರಣಕ್ಕೆ ಆಘಾತ ವ್ಯಕ್ತಪಡಿಸಿರುವ ಮ್ಯಾನ್‌ಹಟನ್‌ ಅಟಾರ್ನಿ ಜನರಲ್‌ ಸೈರಸ್‌ ವಾನ್ಸೆ, ‘ಈ ನಿರ್ಲಜ್ಜತನ ಆಘಾತಕಾರಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT