ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ ಪರೀಕ್ಷೆ ಘಟಕ ತರೆಯಲು ವಿಪ್ರೊ ಪ್ರಸ್ತಾವ

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಪ್ರಮುಖ ಐ.ಟಿ ಕಂಪೆನಿ ವಿಪ್ರೊ, ಭದ್ರತೆಗೆ ಸಂಬಂಧಿಸಿದಂತೆ ದೂರವಾಣಿ ಉಪಕರಣ ಗುಣಮಟ್ಟವನ್ನು ಪರೀಕ್ಷಿಸಿ ಪ್ರಮಾಣಪತ್ರ ನೀಡುವ ಘಟಕ ತೆರೆಯುವ ಪ್ರಸ್ತಾವವನ್ನು ದೂರವಾಣಿ ಇಲಾಖೆ ಮುಂದಿಟ್ಟಿದೆ.

ಪ್ರಸ್ತಾವಿತ ಘಟಕ ಅ. 1ರಿಂದ ಅಸ್ತಿತ್ವಕ್ಕೆ ಬರಲಿದೆ. ದೂರವಾಣಿ ಉಪಕರಣಗಳ ಭದ್ರತೆಗೆ ಸಂಬಂಧಿಸಿದ ಮಾನದಂಡದಡಿ ಉತ್ತಮ, ಮಧ್ಯಮ ಮತ್ತು ಕನಿಷ್ಠ ಎಂದು ಮೂರು ವಿಭಾಗಗಳಾಗಿ ವರ್ಗೀಕರಿಸಿ ಪರೀಕ್ಷಿಸಲಾಗುವುದು ಎಂದು ಇಲಾಖೆ ಮೂಲಗಳು ಹೇಳಿವೆ.

ಮೊಬೈಲ್ ಹ್ಯಾಂಡ್‌ಸೆಟ್, ಸಿಮ್ ಕಾರ್ಡ್, ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ, ಇಂಟರ್‌ನೆಟ್ ಟೆಲಿಫೋನಿ ಸಿಸ್ಟಂ  ಸೇರಿದಂತೆ  12ರಿಂದ 25 ಉಪಕರಣಗಳ ಭದ್ರತಾ ಸುರಕ್ಷೆ ಪರೀಕ್ಷೆ ನಡೆಸಲು ವಿಪ್ರೊ ಪರವಾನಗಿ ಕೋರಿದೆ ಎಂದು ದೂರವಾಣಿ ಇಲಾಖೆ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆದರೆ, ಈ ಕುರಿತು ವಿಪ್ರೊ ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT