ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರನಿಗೆ ಬಡ್ತಿ!

Last Updated 11 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕೆಲವು ವಾರಗಳ ಹಿಂದಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೋಗಯ್ಯ ಮತ್ತು ತಮ್ಮ ಚಿತ್ರದ ನಾಯಕನ `ಮಿ.ಡೂಪ್ಲಿಕೇಟ್~ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ `ಭದ್ರ~ ಚಿತ್ರವನ್ನು ತಡವಾಗಿ ತೆರೆಗೆ ತರುವುದಾಗಿ ಹೇಳಿಕೊಂಡಿದ್ದ ನಿರ್ಮಾಪಕ ಮತ್ತು ವಿತರಕ ಎಂ.ಎನ್.ಕುಮಾರ್ ಈಗ ದಿಢೀರನೆ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
 
ಅದಕ್ಕೆ ಕಾರಣ `ಜೋಗಯ್ಯ~ ಚಿತ್ರದ ಬಿಡುಗಡೆ ಎರಡು ವಾರ ಮುಂದಕ್ಕೆ ಹೋಗಿರುವುದು. ಆದರೆ ಕಳೆದ ವಾರವಷ್ಟೇ ಬಿಡುಗಡೆಯಾಗಿರುವ `ಮಿ.ಡೂಪ್ಲಿಕೇಟ್~ ಚಿತ್ರ ಕೂಡ ಅವರ ನಿರ್ಧಾರ ಅಲುಗಾಡಿಸಿಲ್ಲ.

`ಮಿ.ಡೂಪ್ಲಿಕೇಟ್~ ಬಿಡುಗಡೆಯಾಗಿದ್ದ ಹತ್ತು ಥಿಯೇಟರ್‌ಗಳನ್ನು ಪಡೆದುಕೊಂಡಿರುವ ಅವರು ಸುಮಾರು 120 ಥಿಯೇಟರ್‌ಗಳಲ್ಲಿ `ಭದ್ರ~ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. 15 ಪ್ರಿಂಟ್‌ಗಳನ್ನು ಮಾಡಿಸಿರುವ ಕುಮಾರ್ 100 ಥಿಯೇಟರ್‌ಗಳಲ್ಲಿ ಸೆಟಲೈಟ್ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಿದ್ದಾರಂತೆ.

ನೂರು ಥಿಯೇಟರ್‌ಗಳಿಗೆ ಸೆಟಲೈಟ್ ಸ್ಕ್ರೀನಿಂಗ್ ಮಾಡಲು 20 ಲಕ್ಷ ರೂಪಾಯಿ ಖರ್ಚಾಗಿದೆ. ಆದರೆ ಪ್ರಿಂಟ್‌ಗೆ 55 ಲಕ್ಷ ಖರ್ಚಾಗುತ್ತದೆ. ಪ್ರತೀ ವಾರಕ್ಕೆ ಸೆಟಲೈಟ್ ಬಾಡಿಗೆಗೆ 9 ಲಕ್ಷ ರೂಪಾಯಿ ಖರ್ಚು ಬೀಳುವುದರಿಂದ ಪ್ರಿಂಟ್‌ಗಿಂತ ಸೆಟಲೈಟ್ ಕಡೆ ಹೋಗುವುದು ಸೂಕ್ತ ಎಂಬುದು ಅವರ ಅನಿಸಿಕೆ.

ಚಿತ್ರದ ನಿರ್ದೇಶಕ ಮಹೇಶ್ ರಾವ್ ತಮ್ಮ ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಆಗುತ್ತಿರುವುದರಿಂದ ತಮಗೆ ವರ ಮತ್ತು ನಿರ್ಮಾಪಕರಿಗೆ ಲಕ್ಷ್ಮಿ ಸಿಗಲಿದ್ದಾಳೆ ಎಂದು ಸಂತಸ ಪಟ್ಟರು.

ಸಿನಿಮಾದ ಖಳನಾಯಕ ಮೈಕೋ ನಾಗರಾಜ್ ಮತ್ತು ನಾಯಕ ಪ್ರಜ್ವಲ್ ಇಬ್ಬರಿಗೂ ಮೂಲ ಚಿತ್ರಕ್ಕಿಂತ ತಮ್ಮ `ಭದ್ರ~ ಅದ್ಭುತವಾಗಿದೆ ಎನಿಸಿದೆ. ಪ್ರಜ್ವಲ್‌ಗೆ ಪದೇ ಪದೇ ತಮ್ಮ ಮೊದಲ `ಸಿಕ್ಸರ್~ ಈ ಚಿತ್ರದ ಸಂದರ್ಭದಲ್ಲಿ ನೆನಪಾಯಿತಂತೆ.
 
ಈ ಮೊದಲು `ಎನ್‌ಕೌಂಟರ್ ದಯಾನಂದ್~ ಚಿತ್ರದ ಐಟಂ ಹಾಡಿನಲ್ಲಿ ನರ್ತಿಸಿದ್ದ ಡೈಸಿ ಶಾ ಈ ಚಿತ್ರದ ನಾಯಕಿ. ತಾವು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ನೀಡಿದ ಖುಷಿಯನ್ನು ಆಕೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT