ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾಗೆ ಹೋರಾಟ

Last Updated 18 ಜನವರಿ 2011, 9:55 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಮಂಗಳವಾಡ ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾದ ಜೆಡಿಎಸ್ ಅಭ್ಯರ್ಥಿ ನಳಿನಾ ಗೋವಿಂದಪ್ಪ ಅವರೊಂದಿಗೆ ನಡೆಸಿದ ಸಂದರ್ಶನ.
* ರಾಜಕೀಯ ಸೆಳೆತ ಹೇಗೆ?
ನನ್ನ ತವರು ಹಾಗೂ ಗಂಡನ ಮನೆ ಎರಡೂ ರಾಜಕೀಯ ಕುಟುಂಬಗಳು. ಹೀಗಾಗಿ ನನಗೆ ರಾಜಕೀಯ ಹೊಸದಲ್ಲ. ನಮ್ಮ ಮಾವ ಗೊಂಚಿಕಾರ ಹನುಮಂತಪ್ಪ (ಕರೇಕಲ್ಲಪ್ಪ) ಬಹಳ ದೊಡ್ಡ ಹೆಸರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರಲ್ಲ, ಸ್ಪರ್ಧೆ ಮಾಡಿದವರನ್ನು ಗೆಲ್ಲಿಸಿದವರು.

* ಗೆಲುವು ದಕ್ಕಿದ್ದು ಹೇಗೆ?
ಮಗ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ನಮ್ಮ ಯಜಮಾನರು ಅನಾರೋಗ್ಯದಿಂದ ತೀರಿಕೊಂಡರು. ನನ್ನ ಮಗ ಹೆಚ್ಚಿನ ಬಹುಮತದಿಂದ ಅಯ್ಕೆಯಾದ. ಈ ಕಾರಣದಿಂದ ಕಾರ್ಯಕರ್ತರ ನಂಬಿಕೆ ವಿಶ್ವಾಸ ಪಕ್ಷದ ನಾಯಕರ ಸಹಕಾರ ಗೆಲುವಿಗೆ ಸಹಕಾರಿಯಾಗಿದೆ.

* ಕ್ಷೇತ್ರದ ಪ್ರಮುಖ ಸಮಸ್ಯೆ?
ಅಂತರ್ಜಲ ಹೆಚ್ಚಿಸುವ, ಶುದ್ಧ ಕುಡಿಯುವ ನೀರು ಯೋಜನೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಭದ್ರಾ ನೀರು ಯೋಜನೆ ಪಾವಗಡ ತಾಲ್ಲೂಕಿಗೆ ಅನಿವಾರ್ಯ. ಈ ಯೋಜನೆ ಹೋರಾಟಕ್ಕೆ ಬೆಂಬಲವಿದೆ. ಮಹಿಳೆಯರ ಸಮಸ್ಯೆಗೆ ಹೆಚ್ಚು ಒತ್ತು ನೀಡುತ್ತೇನೆ.

* ಗ್ರಾಮಗಳು ಪ್ರಗತಿ ಕಂಡಿಲ್ಲ?
ಮೂಲಸೌಲಭ್ಯಗಳ ಕೊರತೆ ಎಲ್ಲ ಹಳ್ಳಿಗಳಲ್ಲೂ ಇದೆ. ನೈರ್ಮಲ್ಯ ಸಾಲದು. ಮಹಿಳೆಯರಲ್ಲಿ ಕೀಳರಿಮೆ ಹೋಗಿಲ್ಲ. ಮಹಿಳೆಯರಲ್ಲಿ ಹೊಸತನ ವನ್ನು ತರುವ ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ಅವರನ್ನು ಮಾನಸಿಕವಾಗಿ ತಯಾರಿ ಮಾಡಬೇಕಿದೆ. ಇಂದಿಗೂ ಅನೇಕ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಶಿಕ್ಷಣ ನೀಡುವುದು ನನ್ನ ಕನಸು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT