ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿಗ್ರಹ: ಭಾರತ -ನೇಪಾಳ ಚರ್ಚೆ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಕಠ್ಮಂಡು ( ಪಿಟಿಐ):  ದೇಶಗಳ ಗಡಿಯೊಳಗೆ ಖೋಟಾನೋಟು ಹಾಗೂ ಮಾದಕ ವಸ್ತು ಕಳ್ಳಸಾಗಣೆಗೆ ತಡೆ, ಭಯೋತ್ಪಾದನೆ ನಿಗ್ರಹಕ್ಕೆ ಮಾಹಿತಿ ಹಂಚಿಕೆ ಸೇರಿದಂತೆ ಮತ್ತಿತರರ ಅಪರಾಧಿ ಚಟುವಟಿಕೆ ನಿಲ್ಲಿಸುವ ಕ್ರಮಕ್ಕೆ ಭಾರತ ಮತ್ತು ನೇಪಾಳ ಮುಂದಾಗಿವೆ.

ಭಾರತದ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಹಾಗೂ ನೇಪಾಳದ ನವೀನ್ ಕುಮಾರ್ ಘಮಿರೆ ನಡುವೆ ಕಠ್ಮಂಡುವಿನಲ್ಲಿ ಶನಿವಾರ ನಡೆದ  ವಾರ್ಷಿಕ ಗೃಹ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಎರಡೂ ದೇಶಗಳ ನಡುವಿನ ಗಡಿಗಳಲ್ಲಿ ಎಚ್ಚರಿಕೆ ವಹಿಸುವ ಸಂಬಂಧ ಮಾತುಕತೆ ನಡೆಯಿತು.

ಗಡಿ ನಿರ್ವಹಣೆ, ಎರಡೂ ಗಡಿಗಳ ಬದಿಗಳಲ್ಲಿ ವಾಸಿಸುವ ಜನರ ಭದ್ರತೆ ಕುರಿತು ಇಬ್ಬರೂ ಕಾರ್ಯದರ್ಶಿಗಳ ನಡುವಿನ ಮಾತುಕತೆಯಲ್ಲಿ ಚರ್ಚಿಸಲಾಯಿತು ಎಂದು ನೇಪಾಳ ಗೃಹ ಸಚಿವಾಲಯ ಹೇಳಿದೆ.

ನೇಪಾಳ ಮೂಲಕ ಭಾರತಕ್ಕೆ ಅಕ್ರಮ ಒಳನುಸುಳುವಿಕೆ ಬಗ್ಗೆ ಈಗಾಗಲೇ ಭಾರತ ಆತಂಕ ವ್ಯಕ್ತಪಡಿಸಿದೆ. ನೇಪಾಳದಲ್ಲಿನ ಭಾರತದ ರಾಯಭಾರಿ ಜಯಂತ್ ಪ್ರಸಾದ್ ಸಹ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT