ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಆಟಗಾರ್ತಿ ಲಿಖಿತಾ...

ಆಡೂ ಆಟ ಆಡು
Last Updated 25 ಡಿಸೆಂಬರ್ 2013, 6:06 IST
ಅಕ್ಷರ ಗಾತ್ರ

ಈ ಬಾರಿ ನಡೆದ ರಾಷ್ಟ್ರೀಯ ಸಬ್‌ಜೂನಿಯರ್‌ ಕೊಕ್ಕೊ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದವರು ಪ್ರತಿಭಾನ್ವಿತ ಆಟಗಾರ್ತಿ ಡಿ.ಲಿಖಿತಾ.

ಮಾರುತಿ ವಿದ್ಯಾಕೇಂದ್ರದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಈಚೆಗೆ ನಡೆದ ಸಬ್‌ ಜೂನಿಯರ್‌ ಪಂದ್ಯಾವಳಿಯಲ್ಲಿ ಯಾರ ಕೈಗೂ ಸಿಗದಂತೆ ಚಿಗರೆಯಂತೆ ಓಡಿ ಎಲ್ಲರ ಗಮನ ಸೆಳೆದರು.

‘ನನ್ನ ಶಿಷ್ಯೆ ವೈಯಕ್ತಿಕ ಪದಕಗಳನ್ನು ಗಳಿಸದೆ ಹೋದರೂ, ಕ್ಲಿಷ್ಟ ಸನ್ನಿವೇಶದಲ್ಲಿ ಪಂದ್ಯವನ್ನು ಗೆಲ್ಲಿಸಬಲ್ಲ ತಾಕತ್‌ ಹೊಂದಿದ್ದಾಳೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ತರಬೇತುದಾರ ವಿನಯ್‌.

ಒಂದೇ ವರ್ಷದಲ್ಲಿ 2 ರಾಷ್ಟ್ರೀಯ, 1 ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಲಿಖಿತಾ ಕೊಕ್ಕೊ ಅಂಗಳಕ್ಕೆ ಕಾಲಿಟ್ಟಿದ್ದೆ ಎರಡೂ ವರ್ಷಗಳ ಹಿಂದೆ.

‘ಅಣ್ಣ ಕಾರ್ತೀಕ್‌ ಶಾಲಾ ದಿನಗಳಲ್ಲಿ ಉತ್ತಮ ಕೊಕ್ಕೊ ಆಟಗಾರನಾಗಿದ್ದ. ನಾನು ಅವನಂತೆಯೆ ಕೊಕ್ಕೊ ಆಟಗಾರ್ತಿಯಾಗಬೇಕು ಎಂಬ ಇರಾದೆ ಶಾಲೆಯ ದಿನಗಳಲ್ಲಿಯೇ ಇತ್ತು ಅದಕ್ಕೆ ತಯಾರಿ ನಡೆಸಿದ್ದೆ’ ಎನ್ನುವುದು ಲಿಖಿತಾ ಮನದಾಳದ ಮಾತು.

ವರ್ಷದ ಹಿಂದೆ ನಡೆದ ಮ್ಯಾರಥಾನ್‌ ಸ್ಪರ್ಧೆಯ 5 ಕಿ.ಮೀ. ಓಟದಲ್ಲಿ 4ನೇ ಸ್ಥಾನ, 4 ಕಿ.ಮೀ. ಓಟದಲ್ಲಿ 14ನೇ ಸ್ಥಾನವನ್ನು ಪಡೆದೆ; ಅಂದು ನಮ್ಮ ಶಾಲೆಯ ವಿನಯ್‌ ಸರ್‌ ಕೊಕ್ಕೊ ಆಡುವಂತೆ ಹೇಳಿದರು. ಅವರ ಮಾರ್ಗದರ್ಶನದಲ್ಲಿಯೇ ಪಕ್ವ ಆಟಗಾರ್ತಿಯಾದೆ ಎಂದು ಲಿಖಿತಾ ತಾನು ಕೊಕ್ಕೊ ಅಂಕಣಕ್ಕೆ ಕಾಲಿಟ್ಟ  ಸನ್ನಿವೇಶ ವಿವರಿಸುತ್ತಾರೆ.

ಅಣ್ಣ ಕೊಕ್ಕೊ ಆಟಗಾರನಾದರೂ ಪಂದ್ಯಾವಳಿಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ ನಾನು ಅನೇಕ ಬಾರಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದೇನೆ. ಹೈದರಾಬಾದ್‌ನಲ್ಲಿ ನಡೆದ ಕ್ಲಸ್ಟರ್‌ ಮಟ್ಟದ ಪಂದ್ಯಾವಳಿಗೆ ಪಾಲ್ಗೊಂಡಿದ್ದು ನನಗೆ ಹೊರ ರಾಜ್ಯದ ಮೊದಲ ಅನುಭವ. ಅಪ್ಪ ಎಲ್‌.ದೇವರಾಜ್‌– ಅಮ್ಮ ಕಾಂತಮ್ಮ ತುಂಬಾ ಬೆಂಬಲ ನೀಡಿದರು.

ಈಚೆಗೆ ತುಮಕೂರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ತವರು ಹುಡುಗಿ ಎನ್ನುವ ಕಾರಣಕ್ಕೆ ಅಂಗಳದಲ್ಲಿ ಇದ್ದಷ್ಟು ಕ್ಷಣ ಉತ್ತೇಜನ ಸಿಗುತ್ತಿತ್ತು. ಪ್ರೇಕ್ಷಕರ ಉತ್ತೇಜನದಿಂದಲೇ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎನ್ನುತ್ತಾರೆ ಲಿಖಿತಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT