ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಭದ್ರತೆಗೆ ವಿಮೆ ಅಗತ್ಯ

Last Updated 6 ಫೆಬ್ರುವರಿ 2012, 9:10 IST
ಅಕ್ಷರ ಗಾತ್ರ

ಔರಾದ್: ಕುಟುಂಬಗಳು ಚಿಕ್ಕದಾಗುತ್ತಿದ್ದಂತೆ ಜೀವ ವಿಮೆ ಬೇಡಿಕೆ ಜಾಸ್ತಿಯಾಗುತ್ತಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಬೀದರ್ ಶಾಖಾ ವ್ಯವಸ್ಥಾಪಕ ಬಿ. ವೆಂಕಟರೆಡ್ಡಿ ಹೇಳಿದರು.

 ಇಲ್ಲಿಯ ಅಮರೇಶ್ವರ ಕಾಲೇಜಿನಲ್ಲಿ ಭಾನುವಾರ ವಿಮಾ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ. ಈಚೆಗೆ ಹೊಸದಾಗಿ ಮಾರುಕಟ್ಟೆಗೆ ಬಂದ `ಜೀವನ ಅಂಕುರ್~ ಪಾಲಿಸಿ ಮಕ್ಕಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ವಿನೂತನ ಯೋಜನೆಯಾಗಿದೆ. ಮಗುವಿನ ಶಿಕ್ಷಣ ವೆಚ್ಚ ಮತ್ತಿತರೆ ಹಣಕಾಸು ಅಗತ್ಯತೆಗಳು ಈಡೇರಿಸಲು ಪಾಲಕರು ಈ ಪಾಲಿಸಿ ಪಡೆದುಕೊಳ್ಳಲು ಪ್ರತಿನಿಧಿಗಳು ತಿಳಿ ಹೇಳಬೇಕು ಎಂದರು.

ಅಭಿವೃದ್ಧಿ ಅಧಿಕಾರಿ ಗುರುರಾಜ ಜೀವನ ಅಂಕುರ್ ಪಾಲಿಸಿ ಬಗ್ಗೆ ವಿವರಿಸಿದರು. ಪಾಲಿಸಿ ತೆಗೆದುಕೊಂಡ ಕ್ಷಣದಿಂದಲೇ ವಿಮೆ ಸೌಲಭ್ಯ ಸಿಗುತ್ತದೆ. ರೂ. 1 ಲಕ್ಷದ ವಿಮೆ ಪಾಲಿಸಿ ತೆಗೆದುಕೊಂಡ ನಂತರ ಯಾವುದೇ ಕ್ಷಣದಲ್ಲಿ ಪಾಲಿಸಿದಾರರಂತೆ ತಾಯಿ ಅಕಸ್ಮಿಕವಾಗಿ ಮೃತಪಟ್ಟರೆ, ತಕ್ಷಣಕ್ಕೆ ರೂ. 1 ಲಕ್ಷ ಪರಿಹಾರ ಮಗುವಿನ ಹೆಸರಿಗೆ ವರ್ಗಾಯಿಸಲಾಗುತ್ತದೆ.

ಜತೆಗೆ ಪಾಲಿಸಿಗೆ ಒಂದು ವರ್ಷ ತುಂಬಿದ ನಂತರ ಪಾಲಿಸಿ ಮೊತ್ತದ ಶೇ. 10ರಷ್ಟು ಪ್ರತಿ ವರ್ಷ ಮಗುವಿಗೆ ಪಾಲಿಸಿ ಮುಗಿಯುವ ತನಕ ನೀಡಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಮಾತನಾಡಿದರು. ಹಿರಿಯ ಅಭಿವೃದ್ಧಿ ಅಧಿಕಾರಿ ಆರ್. ಶಾಮರಾವ ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT