ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಯೋಧನಿಗೆ ಅತ್ಯಾಧುನಿಕ ಸಾಧನ

Last Updated 12 ಫೆಬ್ರುವರಿ 2011, 6:20 IST
ಅಕ್ಷರ ಗಾತ್ರ

ಬೆಂಗಳೂರು: ಭವಿಷ್ಯದ ಭಾರತೀಯ ಯೋಧ ಹೇಗಿರಬಹುದು? ದುರ್ಗಮ ಅಡವಿಯಲ್ಲಿ ಇರುವ ಯೋಧನ ಕಣ್ಣಿಗೆ ಕಾಣುತ್ತಿರುವ ಎಲ್ಲ ವಸ್ತುಗಳೂ ನಿಯಂತ್ರಣ ಕೇಂದ್ರದಲ್ಲಿ ಕುಳಿತಿರುವ ಅವನ ಮುಖ್ಯಸ್ಥನಿಗೂ ಕಾಣುವಂತಿದ್ದರೆ ಹೇಗೆ?

ಇಂಥದ್ದೊಂದು ಸಾಧ್ಯತೆ ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ ಸಂಶೋಧನಾ ಕೇಂದ್ರದಲ್ಲಿ ನಿಜವಾಗಿದೆ. ಈ ಸಾಧನ ಇನ್ನೂ ಭಾರತೀಯ ಸೇನೆಗೆ ಸೇರಿಲ್ಲವಾದರೂ, ಮುಂದೊಂದು ದಿನ ಇದನ್ನು ವ್ಯಾಪಕವಾಗಿ ಬಳಸುವ ಸಾಧ್ಯತೆ ಇಲ್ಲದಿಲ್ಲ. ಈ ಸಾಧನ ಧರಿಸಿರುವ ಯೋಧ ತುರ್ತು ಸಂದರ್ಭದಲ್ಲಿ ಸಿಲುಕಿಕೊಂಡಾಗ ತನ್ನ ಪರಿಸ್ಥಿತಿ ಹೇಗಿದೆ ಎಂಬುದನ್ನು ಯಥಾವತ್ತಾಗಿ ಕಮಾಂಡೋಗೆ ತೋರಿಸಬಹುದು. ನೇರವಾಗಿ ನಿಯಂತ್ರಣ ಕೇಂದ್ರದ ಜೊತೆ ಸಂಪರ್ಕ ಸಾಧಿಸಬಹುದು. ಅಲ್ಲಿಂದ ಸೂಚನೆಗಳನ್ನೂ ನೇರವಾಗಿ ಪಡೆಯಬಹುದು.

ಬಿಇಎಲ್ ಅಭಿವೃದ್ಧಿಪಡಿಸಿರುವ ಈ ಜಾಕೆಟ್ ಮಾದರಿಯ ಸಾಧನದಲ್ಲಿ ಒಂದು ಕ್ಯಾಮೆರಾ, ಸ್ವಯಂಚಾಲಿತ ಬ್ಯಾಟರಿ, 72 ಗಂಟೆಗಳಿಗೆ ಸಾಕಾಗುವಷ್ಟು ಆಹಾರ, ಬುಲೆಟ್ ಪ್ರೂಫ್ ಜಾಕೆಟ್ ಇರಲಿದೆ. ಯೋಧ ಧರಿಸಿರುವ ಜಾಕೆಟ್ ಒಂದು ಆಂಟೆನಾವನ್ನೂ ಹೊಂದಿದ್ದು, ಅದು ನಿಯಂತ್ರಣ ಕೊಠಡಿಗೆ ದೃಶ್ಯ ಮತ್ತು ಶ್ರವಣ ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಇದು ಯೋಧನ ಕಣ್ಣ ಮುಂದೆ ಇರುವ ಎಲ್ಲವೂ ಯಥಾವತ್ತಾಗಿ ನಿಯಂತ್ರಣ ಕೊಠಡಿಯ ಪರದೆಯ ಮೇಲೆ ಮೂಡುವಂತೆ ಮಾಡುತ್ತದೆ. ಯೋಧನ ಹೆಲ್ಮೆಟ್‌ಗೆ ಒಂದು ಕ್ಯಾಮೆರಾ, ಹೆಡ್‌ಫೋನ್ ಮತ್ತು ಸಂಭಾಷಣೆ ನಡೆಸಲು ಅನುವಾಗುವಂತೆ ಚಿಕ್ಕ ರಿಸೀವರ್ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT