ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 16-12-1962

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಇಂದು ಬೊಮ್ಡಿಲಾದಲ್ಲಿ ಸಿವಿಲ್ ಆಡಳಿತ ಆರಂಭ
ದೆಹಲಿ, ಡಿ. 15 - ನೀಫಾದ ಕಾಮೆಂಗ್ ಡಿವಿಜನ್ನಿನ ಬೊಮ್ಡಿಲಾದಲ್ಲಿ ನಾಳೆಯಿಂದ ಸಿವಿಲ್ ಆಡಳಿತ ಆರಂಭವಾಗುವುದು ಖಚಿತವಾಯಿತು.
ಆಡಳಿತವರ್ಗದ 200 ಮಂದಿ ಈ ಸಂಜೆ ಫುಟ್‌ಹಿಲ್ಸ್ ಎಂಬ ಸ್ಥಳದಲ್ಲಿ ಸೇರಿ ನಾಳೆ ಬೆಳಿಗ್ಗೆ ಸಾಮಾನು ಸರಂಜಾಮುಗಳ ಸಮೇತ ಬೊಮ್ಡಿಲಾಕ್ಕೆ ಹೊರಟು ಮಧ್ಯಾಹ್ನ ಬೊಮ್ಡಿಲಾವನ್ನು ತಲುಪುವರು. ಮೇಜರ್ ಜೋಹಿಯವರು ಈ ತಂಡದ ನಾಯಕತ್ವ ವಹಿಸಿದ್ದಾರೆ.

ವಾಲಾಂಗ್, ಮೆಚುಕಗಳಲ್ಲಿನ ಸ್ಥಿತಿಯಲ್ಲಿ ಬದಲಾವಣೆ ಇಲ್ಲ. ಈ ಭಾಗಗಳಿಂದ ಚೀಣೀಯರು ವಾಪಸಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ಸ್ಕೌಟ್ ತಂಡ ಆ ಸ್ಥಳಗಳಿಗೆ ಧಾವಿಸಿದೆ. ಲಡಖ್‌ನಲ್ಲಿ ಇದುವರೆಗೆ ಚೀಣೀಯರು ವಾಪಸಾದ ಚೆಹ್ನೆಗಳೇ ಇಲ್ಲ.

ಮೊದಲ ದಿನದ ಆಟದಲ್ಲಿ 15 ವಿಕೆಟ್ ಪತನ
ಮದರಾಸು, ಡಿ. 15 - ಬೌಲರುಗಳದು ಸಂಪೂರ್ಣವಾಗಿ ಮೇಲುಗೈ ಆಗಿದ್ದ ಮದರಾಸು - ಮೈಸೂರು ನಡುವಣ ದಕ್ಷಿಣ ವಲಯ ರಣಜೀ ಕ್ರಿಕೆಟ್ ಚಾಂಪಿಯನ್ ಷಿಪ್ಸ್ ಲೀಗಿನ ಮೊದಲ ದಿನದ ಐದೂವರೆ ಗಂಟೆಗಳ ಆಟದಲ್ಲಿ 15 ವಿಕೆಟ್‌ಗಳು ಒಟ್ಟು 220 ರನ್ನುಗಳಿಗೆ ಬಿದ್ದವು. ಮೊದಲು ಆಡಿದ ಮದರಾಸು ಟೀಮಿನವರು ಟೀ ನಂತರ 5 ನಿಮಿಷದವರೆಗೂ ಆಡಿ 176 ರನ್ನುಗಳಿಗೆ ಔಟಾದರು.

ಭಾರತದ ಪರ ಚೀಣಾ ಮೇಲೆ
ಯುದ್ಧ ಘೋಷಿಸಲು ಸಿಂಹಳಕ್ಕೆ ಒತ್ತಾಯ

ಕೊಲಂಬೋ, ಡಿ. 15 - ಸಿಂಹಳದ ವಿಧಾನ ಸಭೆಯ ಡೆಪ್ಯುಟಿ ಸ್ಪೀಕರ್ ಹ್ಯೂಫರ್‌ನಾಂಡೊರವರು ಪತ್ರಿಕಾ ಹೇಳಿಕೆಯಿತ್ತು, ಭಾರತದ ಮೇಲೆ ಚೀಣಾದ ದುರಾಕ್ರಮಣವನ್ನು ತೀವ್ರವಾಗಿ ಪ್ರತಿಭಟಿಸಿದ್ದಾರೆ.

ಚೀಣ `ಪಂಚಶೀಲ'ದ ಅನುವರ್ತಿ ಆದರೆ `ಪಂಚಶೀಲ' ಚೀಣದ ಅರ್ಥ `ಸುಳ್ಳಿನ ಉಪದೇಶ' ಎಂದು ಅವರು ತಿಳಿಸಿದರು. ಭಾರತವನ್ನು ಕಬಳಿಸಲು ಪ್ರಯತ್ನಿಸುತ್ತಿರುವ ಚೀಣದ ದುರಾಕ್ರಮಣ ನೀತಿಯನ್ನು ಹತ್ತಿಕ್ಕಲು ಸಿಂಹಳವು ಚೀಣದ ಮೇಲೆ ಯುದ್ಧ ಘೋಷಿಸಬೇಕೆಂದು ಅವರು ಹೇಳಿದ್ದಾರೆ.

ಉತ್ತರ ರಷ್ಯಾದಲ್ಲಿ ಅಣುಸ್ಪೋಟ
ಸ್ಟಾಕ್ಹೋಮ್, ಡಿ. 15 - ಉತ್ತರ ರಷ್ಯಾದಲ್ಲಿ ಅಣುಸ್ಫೋಟನೆ ನಡೆದುದು ಇಂದು ಇಲ್ಲಿ ದಾಖಲೆಯಾಯಿತು.

ಜನಮತಗಣನೆಗಿಂತ ಉತ್ತಮ ಸಲಹೆ ಬಂದಲ್ಲಿ ಪರಿಶೀಲನೆ: ಅಯೂಬ್
ಕರಾಚಿ, ಡಿ. 15 - ಕಾಶ್ಮೀರದ ಬಗ್ಗೆ ಭಾರತ - ಪಾಕಿಸ್ತಾನಗಳ ನಡುವಣ ರಾವಲ್ಪಿಂಡಿಯ ಮಾತುಕತೆಗೆ ನಿಷ್ಪಕ್ಷಪಾತ ಜನಮತ ಗಣನೆಯೇ ಆಧಾರವಾಗಿರಬೇಕೆಂಬುದಾಗಿ ಪಾಕಿಸ್ತಾನ್ ಅಧ್ಯಕ್ಷ ಅಯೂಬ್ ಖಾನ್‌ರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಜನಮತ ಗಣನೆಗಿಂತ ಉತ್ತಮವಾದ ಸಲಹೆಯನ್ನು ಯಾರಾದರೂ ನೀಡಿದರೆ `ನಾವು ಅದನ್ನು ಪರಿಶೀಲಿಸುತ್ತೇವೆ' ಎಂಬುದಾಗಿಯೂ ಅವರು ನುಡಿದರು
.
ಸಚಿವ ವರ್ಗವೇ ಹಾಜರಿರದೆ
ಅರ್ಧ ಗಂಟೆ ಪರಿಷತ್ ಮುಂದೂಡಿಕೆ

ಬೆಂಗಳೂರು, ಡಿ. 15 - ಸಚಿವರುಗಳಾಗಲಿ, ಉಪಸಚಿವರುಗಳಾಗಲಿ ಯಾರೊಬ್ಬರೂ ಸಭೆಯಲ್ಲಿ ಹಾಜರಿರಲಿಲ್ಲವಾಗಿ ಇಂದು ವಿಧಾನ ಪರಿಷತ್ತನ್ನು ಅರ್ಧಗಂಟೆ ಕಾಲ ಮುಂದುವರಿಸಬೇಕಾದ ಪರಿಸ್ಥಿತಿ ಒದಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT