ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 28-7-1963

Last Updated 27 ಜುಲೈ 2013, 19:59 IST
ಅಕ್ಷರ ಗಾತ್ರ

ಉತ್ತರದ ಗಡಿಯಲ್ಲಿ ಹೆಚ್ಚು ಚೀಣೀ ಸೇನೆ ಸಂಗ್ರಹ: ನೆಹರೂ ಎಚ್ಚರಿಕೆ
ಹೈದರಾಬಾದ್, ಜುಲೈ 27 - `ಭಾರತದ ಉತ್ತರದ ಗಡಿ ಯುದ್ದಕ್ಕೂ ಕಳೆದ ಎರಡು, ಮೂರು ದಿನಗಳಿಂದ ಚೀಣೀಯರು ಹೆಚ್ಚು ಸೇನೆ ಸಂಗ್ರಹಿಸುತ್ತಿದ್ದಾರೆಂದು ವರದಿಗಳು ಬಂದಿವೆ' ಎಂದು ನೆಹರೂ ಇಂದು ಇಲ್ಲಿ ತಿಳಿಸಿದರು.

`ಉತ್ತರದ ಸರಹದ್ದಿನಲ್ಲಿ ನಡೆಯುತ್ತಿರುವ ಚೀಣೀ ಸೇನಾ ಸಂಗ್ರಹ ಭಾರತಕ್ಕೆ ವಿಪತ್ಕಾರಿ, ನಾವು ಸಿದ್ಧರಾಗಿರಬೇಕು' ಎಂದೂ ನೆಹರೂ ಸ್ಪಷ್ಟಪಡಿಸಿದರು.

ಆಂಧ್ರದ ವಿಧಾನ ಸಭೆ, ವಿಧಾನ ಪರಿಷತ್ತಿನ ಅಧ್ಯಕ್ಷರು ತಮ್ಮ ಗೌರವಾರ್ಥ ನೀಡಿದ ಸತ್ಕಾರ ಕೂಟದಲ್ಲಿ ಮಾತನಾಡುತ್ತ ನೆಹರೂ, `ಭಾರತದ ಸೇನಾ ಮಹಾದಂಡ ನಾಯಕ ಜ. ಚೌಧರಿ ಅವರು ನಾಳೆ ದೆಹಲಿಗೆ ಆಗಮಿಸುವರು' ಎಂದರು.

ಕೇಂದ್ರದಲ್ಲಿ ಸಕ್ಕರೆಯ ವಿಶೇಷ ದಾಸ್ತಾನು?
ಮುಂಬೈ, ಜುಲೈ 27 - ಅಕ್ಕಿ - ಗೋಧಿ ಬಗ್ಗೆ ಅನುಸರಿಸುತ್ತಿರುವಂತೆಯೇ ಸಕ್ಕರೆ ಬಗೆಗೂ ವಿಶೇಷ ದಾಸ್ತಾನು ನೀತಿಯನ್ನು ಸರ್ಕಾರ ಅನುಸರಿಸಬಹುದೆಂದು ನಿನ್ನೆ ಇಲ್ಲಿ ಭಾರತೀಯ ವರ್ತಕ ಮಂಡಲಿಯಲ್ಲಿ ಭಾಷಣ ಮಾಡಿದ ಕೇಂದ್ರ ಆಹಾರ ಮಂತ್ರಿ ಶ್ರೀ ಎಸ್. ಕೆ. ಪಾಟೀಲ್ ಸೂಚನೆ ಇತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT