ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 3-2-1963

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

1963-64 ರಲ್ಲಿ ವ್ಯವಸಾಯಕ್ಕೆ ಶೇ. 25 ರಷ್ಟು ಹೆಚ್ಚು ಹಣ ನೀಡಿಕೆ
ನವದೆಹಲಿ, ಫೆ. 2
- 1963-64 ರಲ್ಲಿ ರಾಜ್ಯಗಳ ಯೋಜನೆಗಳಲ್ಲಿ ವ್ಯವಸಾಯಕ್ಕಾಗಿ ಪ್ರಸಕ್ತ ವರ್ಷ ಒದಗಿಸಲಿರುವುದಕ್ಕಿಂತ ಶೇ. 25ಕ್ಕೂ ಹೆಚ್ಚು ಹಣವನ್ನು ಒದಗಿಸುವ ಸಂಭವವುಂಟೆಂದು ಯೋಜನಾ ಮಂಡಳಿಯ ಸದಸ್ಯರಾದ ಶ್ರೀ ಶ್ರೀಮನ್ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.

ತೃತೀಯ ಯೋಜನೆಯ ಮೊದಲೆರಡು ವರ್ಷಗಳಲ್ಲಿ ವ್ಯವಸಾಯದಲ್ಲಿ ಕಡಿಮೆ ಹಣವನ್ನು ಹೂಡಿರುವುದರಿಂದುಂಟಾದ ಕೊರತೆಯನ್ನು ನಿವಾರಿಸುವುದಕ್ಕೂ, ಭೌತಿಕ ಸಾಧ್ಯತೆಗಳು ಮತ್ತು ಹಣಕಾಸಿನ ಮೂಲಗಳ ನಡುವಣ ಅಂತರವನ್ನು ಭಾಗಶಃ ಕಡಿಮೆ ಮಾಡುವುದಕ್ಕೂ ಇದರಿಂದ ನೆರವಾಗುವುದೆಂದೂ ಅವರು ಹೇಳಿದರು.

ವ್ಯವಸಾಯವನ್ನು ಕುರಿತ ರಫ್ತಿನ ಮಂಡಳಿಯ ಸಭೆಯಲ್ಲಿ ಮಾತನಾಡುತ್ತ ಶ್ರೀ ಶ್ರೀಮನ್ನಾರಾಯಣ್ ಅವರು, 1963-64ರ ರಾಜ್ಯಗಳ ವ್ಯವಸಾಯದ ಯೋಜನೆಗಳ ತಯಾರಿಕೆಯಲ್ಲಿ ಭಾಗವಹಿಸಲು ಆಹಾರ ಮತ್ತು ವ್ಯವಸಾಯ ಶಾಖೆ, ಸಮೂಹಾಭಿವೃದ್ಧಿ ಸಚಿವ ಶಾಖೆ ಮತ್ತು ಯೋಜನಾ ಮಂಡಳಿಯ ಹಿರಿಯ ಅಧಿಕಾರಿಗಳು ಇರುವ ಜಂಟೀ ತಂಡಗಳನ್ನು ನಾನಾರಾಜ್ಯಗಳಿಗೆ ಕಳುಹಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆಯೆಂದೂ ತಿಳಿಸಿದರು.

ಮತ್ತೆ 105 ಪಠ್ಯ ಪುಸ್ತಕಗಳ ರಾಷ್ಟ್ರೀಕರಣ
ಬೆಂಗಳೂರು, ಫೆ. 2
- ರಾಜ್ಯದಲ್ಲಿ ಮತ್ತೆ 105 ಪಠ್ಯ ಪುಸ್ತಕಗಳನ್ನು ರಾಷ್ಟ್ರೀಕರಣ ಮಾಡುವ ಯೋಜನೆಯನ್ನು ಸರ್ಕಾರ ಅಂಗೀಕರಿಸಿದೆ. ಸರ್ಕಾರ ಈಗಾಗಲೇ 55 ಪುಸ್ತಕಗಳನ್ನು ರಾಷ್ಟ್ರೀಕರಣ ಮಾಡಿದೆ.
105 ಪುಸ್ತಕಗಳ ರಾಷ್ಟ್ರೀಕರಣಕ್ಕೆ 27 ಲಕ್ಷ ರೂಪಾಯಿ ಖರ್ಚಾಗುವುದೆಂದು ಶಿಕ್ಷಣ ಸಚಿವ ಶ್ರೀ ಕಂಠಿ ಅವರು ವರದಿಗಾರರಿಗೆ ತಿಳಿಸಿದರು.

ಭಾರತದ ಹೋರಾಟಕ್ಕೆ ಗ್ರೀಸಿನ ಸಹಾನುಭೂತಿ: ದೊರೆ ಪಾಲ್ ಭರವಸೆ
ನವದೆಹಲಿ, ಫೆ. 2
- ತಮ್ಮ ಮೇಲೆ ನಡೆದಿರುವ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸುತ್ತಿರುವ ಭಾರತೀಯರ ಸಾಹಸಕ್ಕಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ಗ್ರೀಸಿನ ದೊರೆ ಪಾಲ್‌ರವರು, ಈ ಹೋರಾಟದ ಅಂತಿಮ ಜಯದಲ್ಲಿ ತಮಗೆ ನಂಬಿಕೆ ಇದೆ ಎಂದರು. ಇಂದು ಆಗಮಿಸಿದ ದೊರೆ ಪಾಲ್ ಹಾಗೂ ರಾಣಿ ಫ್ರೆಡರಿಕಾ ಅವರನ್ನು ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಸ್ವಾಗತಿಸಿ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT