ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರ ವಸ್ತು ಸಾಗಾಟದಿಂದ ರಸ್ತೆ ಹಾಳು

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೆಲ ಲಾರಿ ಮಾಲೀಕರಿಂದ ಅಧಿಕಾರಿಗಳು ಲಂಚ ಪಡೆದು, ನಿಗದಿತ ಪ್ರಮಾಣಕ್ಕಿಂತ ಅಧಿಕ ಭಾರದ ವಸ್ತುಗಳನ್ನು ಸಾಗಿಸಲು ಅನುಮತಿ ನೀಡುತ್ತಿರುವುದರಿಂದ ಇತರ ಲಾರಿಗಳು ಕೆಲಸ ವಿ ಲ್ಲದೇ ನಿಲ್ಲಬೇಕಾಗಿದ್ದು, ಅಧಿಕ ಭಾರದಿಂದ ರಸ್ತೆಗಳೂ ಹಾಳಾಗುತ್ತಿವೆ~ ಎಂದು ಕರ್ನಾಟಕ ಲಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಆರೋಪಿಸಿದರು.

`ನಿಗದಿತ ಭಾರಕ್ಕಿಂತ ಅಧಿಕ ಭಾರ ಹೊತ್ತೊಯ್ಯುತ್ತಿರುವ ಲಾರಿಗಳನ್ನು ವಶಕ್ಕೆ ಪಡೆಯುವ ಕ್ರಮ ಗುಜರಾತ್, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಜಾರಿಯಲ್ಲಿವೆ. ಕರ್ನಾಟಕದಲ್ಲಿ ಈ ಪದ್ಧತಿ ಇಲ್ಲ. ಈಗಲಾದರೂ ಅಧಿಕಾರಿಗಳು ಅಧಿಕ ಭಾರದ ಲಾರಿಗಳನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು~ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

 `ತನಿಖಾಧಿಕಾರಿಗಳು ತಪಾಸಣೆ ಮಾಡಿ, ಲಾರಿಗಳ ಹೆಚ್ಚುವರಿ ಪ್ರಮಾಣದ ತೂಕವನ್ನು ಸ್ಥಳದಲ್ಲಿಯೇ ಇಳಿಸಬೇಕೆಂದು ನಿಯಮವಿದೆ. ಆದರೆ ಇದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಕೆಲ ಲಾರಿಗಳಿಗೆ ಕೆಲಸ ಸಿಕ್ಕರೆ, ಇನ್ನೂ ಕೆಲವಕ್ಕೆ ಸಿಗುತ್ತಿಲ್ಲ~ ಎಂದು ಅವರು ನುಡಿದರು.

`ನಮ್ಮಲ್ಲೇ ಕೆಲ ಲಾರಿ ಮಾಲೀಕರು ಟೋಕನ್ ವ್ಯವಸ್ಥೆ ಮಾಡಿಕೊಂಡು ತನಿಖಾಧಿಕಾರಿಗಳಿಗೆ ತಿಂಗಳೂ ಮಾಮೂಲು ನೀಡಿ ಅವರ ಲಾರಿಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಅಧಿಕ ಭಾರ ಸಾಗಣೆ ಹೆಚ್ಚಾಗಿದೆ. ಅಂಥವುಗಳನ್ನು ತಡೆಗಟ್ಟಲು ಕೂಡಲೇ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು~ ಎಂದು ಒತ್ತಾಯಿಸಿದರು.

 ಮುಖಂಡರಾದ ವಿಶ್ವನಾಥ್, ಪಾಪಣ್ಣ, ಎಸ್.ಆನಂದ್, ಮುನಿರಾಜು, ಸಂದೀಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT