ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಅಮೆರಿಕ ಮೈತ್ರಿ ಇನ್ನಷ್ಟು ಗಾಢ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ 21ನೇ ಶತಮಾನದಲ್ಲಿ ಎಂದಿಗಿಂತಲೂ ಹೆಚ್ಚು ಸಮಗ್ರವಾಗಿ ಮುನ್ನಡೆಯಲಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗಾಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳು ಸಾಧಿಸಿರುವ ಮೈತ್ರಿಯು ಇಡೀ ವಿಶ್ವಕ್ಕೆ ಅದರಲ್ಲೂ ಏಷ್ಯಾ ಖಂಡದಲ್ಲಿನ ಶಾಂತಿ ಮತ್ತು ಅಭ್ಯುದಯಕ್ಕೆ ಬೆನ್ನೆಲುಬಾಗಲಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನೇಮಕಗೊಂಡಿರುವ ನಿರುಪಮಾ ರಾವ್ ಶುಕ್ರವಾರ ಒಬಾಮ ಅವರನ್ನು ಶ್ವೇತಭವನದ ಕಚೇರಿಯಲ್ಲಿ ಭೇಟಿಯಾಗಿ ತಮ್ಮ ನೇಮಕಕ್ಕೆ ಸಂಬಂಧಿಸಿದ ಪರಿಚಯ ಪತ್ರವನ್ನು ಒಬಾಮ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಬಾಮ ತಮ್ಮ ಈ ಭಾವನೆಗಳನ್ನು ನಿರುಪಮಾ ಅವರೊಂದಿಗೆ ಹಂಚಿಕೊಂಡಿರುವುದಾಗಿ ಇಲ್ಲಿನ ರಾಯಭಾರ ಕಚೇರಿಯು ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

`ಭಾರತದೊಂದಿಗಿನ ಅಮೆರಿಕ ಮೈತ್ರಿ ಸಹಜವಾಗಿಯೇ ಗಾಢವಾದದ್ದು. ಅದರಲ್ಲೂ ಒಬಾಮ ಅವರು ಭಾರತದ ಬಗ್ಗೆ ವೈಯಕ್ತಿಕವಾಗಿ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ~ ಎಂದು ನಿರುಪಮಾ ಈ ಸಂದರ್ಭದಲ್ಲಿ ಶ್ಲಾಘಿಸಿದ್ದಾಗಿ ಪ್ರಕಟಣೆ ವಿವರಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT