ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಆಸ್ಟ್ರೇಲಿಯಾ ವಹಿವಾಟು ದ್ವಿಗುಣ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ಆಸ್ಟ್ರೇಲಿಯಾ ಉತ್ಸುಕವಾಗಿದ್ದು, 2015ರ ವೇಳೆಗೆ ಉಭಯ ರಾಷ್ಟ್ರಗಳ ವಹಿವಾಟಿನ ಮೊತ್ತ 40 ಶತಕೋಟಿ ಡಾಲರ್ ಗುರಿ ತಲುಪಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಭಾರತದ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಗಿಲ್ಲಾರ್ಡ್, ಏಷ್ಯಾದಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ಭಾರತದ ಪ್ರಗತಿ ಚಿತ್ರಣವನ್ನು ಬದಲಿಸಲಿವೆ. ಇಂಧನ, ಬಾಹ್ಯಾಕಾಶ, ಚಿಲ್ಲರೆ ಕ್ಷೇತ್ರ ಮತ್ತಿತರ ರಂಗಗಳಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳು ಭಾರತ ಬದಲಾಗುವಂತೆ ಮಾಡಿವೆ. 2015ರ ಹೊತ್ತಿಗೆ ಎರಡೂ ದೇಶಗಳ ನಡುವಿನ ವಹಿವಾಟಿನ ಮೊತ್ತ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವುದಕ್ಕೆ ಆಸ್ಟ್ರೆಲಿಯಾ ಮುಕ್ತಮನಸ್ಸು ಹೊಂದಿದ್ದು, ಎರಡೂ ದೇಶಗಳಲ್ಲಿ ಇಂಧನದ ಬೇಡಿಕೆ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿದೆ. ಹೀಗಾಗಿ ಇಂಧನ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಉತ್ತಮ ಅವಕಾಶಗಳಿವೆ ಎಂದರು.

ಕೃಷಿ, ಜಲ ಕಾರ್ಯಕ್ಷಮತೆ, ಇಂಧನ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಳ್ಳಲು ಎರಡೂ ದೇಶಗಳು ಒಪ್ಪಂದವೊಂದಕ್ಕೆ ಬಂದಿವೆ. ಭಾರತದ ಮೂಲಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ವಾಣಿಜ್ಯ ಸಚಿವ ಆನಂದ ಶರ್ಮಾ ಅವರಿಂದ ಆಹ್ವಾನ ಬಂದಿದೆ ಎಂದೂ ಗಿಲ್ಲಾರ್ಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT