ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ಕೊರಿಯ ಸಂಸ್ಕೃತಿ ಅನಾವರಣ

Last Updated 17 ಜನವರಿ 2012, 9:05 IST
ಅಕ್ಷರ ಗಾತ್ರ

ಮೈಸೂರು: ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ನೃತ್ಯ, ಹಾಡುಗಳ ಮೂಲಕ ಕೊರಿಯ ವಿದ್ಯಾರ್ಥಿಗಳು ಅವರ ಸಂಸ್ಕೃತಿ, ಕಲೆಯನ್ನು ಅನಾವರಣಗೊಳಿಸಿದರೆ, ಅದಕ್ಕೆ ಸರಿಸಾಟಿ ಎಂಬಂತೆ ಇಲ್ಲಿನ ವಿದ್ಯಾರ್ಥಿಗಳು ಭರತನಾಟ್ಯ, ಮಲೆ ಮಹದೇಶ್ವರ ಸ್ವಾಮಿಯ ಜನಪದ ನೃತ್ಯಗಳನ್ನು ಪ್ರದರ್ಶಿಸಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದರು.

ಹೌದು, ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ನಡೆದದ್ದು ಸೋಮವಾರ ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ.

62ನೇ ಗಣರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ `ಭಾರತ-ಕೊರಿಯ ಸ್ನೇಹ ದಿನ~ವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೊರಿಯ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಗಳೊಂದಿಗೆ ನಡೆಸಿಕೊಟ್ಟ ಆಕರ್ಷಕ ನೃತ್ಯ, ಹಾಡುಗಳು ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವು. ಎರಡು ದೇಶಗಳ ಸಂಸ್ಕೃತಿಯ ಮುಖಾಮುಖಿಗೆ ಕಾರ್ಯ ಕ್ರಮ ಸಾಕ್ಷಿಯಾಯಿತು.

ಮಹಾಜನ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ ಮಾತನಾಡಿ, ಇಂಥ ಕಾರ್ಯಕ್ರಮಗಳಿಂದ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಸಂಸ್ಕೃತಿಯ ವಿನಿಮಯ ದಿಂದ ಪರಸ್ಪರ ಸ್ನೇಹ, ಶಾಂತಿ, ಸೌಹಾರ್ದ ವಾತಾವರಣ ನಿರ್ಮಾಣ ವಾಗುತ್ತದೆ. ಈ ಸ್ನೇಹ ಸೇತುವೆ ಶಾಶ್ವತವಾಗಿರಲಿ ಎಂದು ಹಾರೈಸಿದರು.

ದಕ್ಷಿಣ ಕೊರಿಯದ ಸಿಯೋಲ್ ನ್ಯಾಷನಲ್ ಯೂನಿರ್ವಸಿಟಿ ಆಫ್ ಟೆಕ್ನಾಲಜಿ ಮತ್ತು ಹ್ಯಾಂಗ್ ಯಾಂಗ್ ಸಿನ್ ಯೂನಿರ್ವಸಿಟಿಯ ಒಟ್ಟು 15 ವಿದ್ಯಾರ್ಥಿಗಳು ಚೆನ್ನೈ, ಮೈಸೂರು, ಧಾರವಾಡದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ನಡೆಸಿಕೊಡಲು ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದು ಇಂಟರ್‌ನ್ಯಾಷನಲ್ ನೆಟ್‌ವರ್ಕ್‌ನ ಸಂಯೋಜಕಿ ಸಾರ ಹಾ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌ಬಿಆರ್‌ಆರ್ ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ವಾಸದೇವಮೂರ್ತಿ, ಕಾರ್ಯ ದರ್ಶಿ ಬಿ.ಎಸ್. ಸುಬ್ರಮಣ್ಯಂ, ಉಪನ್ಯಾಸಕಿ ಇಂದ್ರಾಣಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT