ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಆರಂಭಿಕ ಆಘಾತ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್, ಜಮೈಕ: ವೇಗಿ ರವಿ ರಾಂಪಾಲ್ (19ಕ್ಕೆ 2) ಅವರ ಬೌಲಿಂಗ್ ಮುಂದೆ ತಡಕಾಡಿದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್ ಆಯ್ದುಕೊಂಡರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಪ್ರವಾಸಿ ತಂಡ 25 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 69 ರನ್ ಗಳಿಸಿತ್ತು.

ರಾಹುಲ್ ದ್ರಾವಿಡ್ (ಬ್ಯಾಟಿಂಗ್ 30) ಮತ್ತು ವಿರಾಟ್ ಕೊಹ್ಲಿ (ಬ್ಯಾಟಿಂಗ್ 04) ಅವರು ಕ್ರೀಸ್‌ನಲ್ಲಿದ್ದರು.
ಮುರಳಿ ವಿಜಯ್ ಅವರು ಅಭಿನವ್ ಮುಕುಂದ್ ಜೊತೆ ತಂಡದ ಇನಿಂಗ್ಸ್ ಆರಂಭಿಸಿದರು. ಆದರೆ ತಂಡದ ಮೊತ್ತ 15 ಆಗಿದ್ದಾಗ ವಿಜಯ್ (11) ಅವರು ರವಿ ರಾಂಪಾಲ್ ಎಸೆತದಲ್ಲಿ ದೇವೇಂದ್ರ ಬಿಶೂಗೆ ಕ್ಯಾಚಿತ್ತು ನಿರ್ಗಮಿಸಿದರು.

ತಂಡ ಮತ್ತೆ 15 ರನ್ ಸೇರಿಸುವಷ್ಟರಲ್ಲಿ ಅಭಿನವ್ ಮುಕುಂದ್ (11) ಮರಳಿದರು. ಅವರ ವಿಕೆಟ್ ಕೂಡಾ ರಾಂಪಾಲ್ ಪಾಲಾಯಿತು. ಈ ಹಂತದಲ್ಲಿ ಇಬ್ಬರು ಅನುಭವಿಗಳಾದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಜೊತೆಗೂಡಿದರು. ಆದರೆ ದೇವೇಂದ್ರ ಬಿಶೂ ಅವರು ಲಕ್ಷ್ಮಣ್‌ಗೆ (12) ಪೆವಿಲಿಯನ್ ಹಾದಿ ತೋರಿಸಿದರು. 

ಸ್ಕೋರು ವಿವರ

ಭಾರತ: 25 ಓವರ್‌ಗಳಲ್ಲಿ 3 ವಿಕೆಟ್‌ಗೆ 69
ಅಭಿನವ್ ಮುಕುಂದ್ ಬಿ ರವಿ ರಾಂಪಾಲ್  11
ಮುರಳಿ ವಿಜಯ್ ಸಿ ಬಿಶೂ ಬಿ ರವಿ ರಾಂಪಾಲ್ 08
ರಾಹುಲ್ ದ್ರಾವಿಡ್ ಬ್ಯಾಟಿಂಗ್  30
ವಿವಿಎಸ್ ಲಕ್ಷ್ಮಣ್ ಸಿ ಸಮಿ ಬಿ ಬಿಶೂ  12
ವಿರಾಟ್ ಕೊಹ್ಲಿ ಬ್ಯಾಟಿಂಗ್  04
ಇತರೆ: (ಲೆಗ್‌ಬೈ-2, ನೋಬಾಲ್-2)  04
ವಿಕೆಟ್ ಪತನ: 1-15 (ವಿಜಯ್; 3.5), 2-30 (ಮುಕುಂದ್; 11.6), 3-64 (ಲಕ್ಷ್ಮಣ್; 22.1)
ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 8-0-31-0, ರವಿ ರಾಂಪಾಲ್ 8-1-19-1, ಡರೆನ್ ಸಮಿ 7-2-17-0, ದೇವೇಂದ್ರ ಬಿಶೂ 2-2-0-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT