ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಪ್ರಶಸ್ತಿಯ ಗರಿ

ಕ್ರಿಕೆಟ್: 19 ವರ್ಷ ವಯಸ್ಸಿನೊಳಗಿನವರ ಟೂರ್ನಿ
Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಡಾರ್ವಿನ್, ಆಸ್ಟ್ರೇಲಿಯಾ (ಪಿಟಿಐ): ಬೌಲರ್‌ಗಳ ಸಮರ್ಥ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ತಂಡದವರು 19 ವರ್ಷ ವಯಸ್ಸಿನೊಳಗಿನವರ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಕಿರೀಟ ಮುಡಿಗೇರಿಸಿಕೊಂಡರು.

ಮರಾರಾ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ವಿಜಯ್ ಜೋಲ್ ಬಳಗ ಎಂಟು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ಭಾರತದ ಶಿಸ್ತಿನ ಬೌಲಿಂಗ್ ಮುಂದೆ ಪರದಾಟ ನಡೆಸಿ 24.4 ಓವರ್‌ಗಳಲ್ಲಿ ಕೇವಲ 75 ರನ್‌ಗಳಿಗೆ ಆಲೌಟಾಯಿತು.

ಭಾರತ 15.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 76 ರನ್ ಗಳಿಸಿ ಜಯ ಸಾಧಿಸಿತು. ಸುಲಭ ಗುರಿಯನ್ನು ಬೆನ್ನಟ್ಟಿದ ತಂಡ ಅಖಿಲ್ ಹೆರ್ವಾಡ್ಕರ್ (0) ಮತ್ತು ಜೋಲ್ (9) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಅಂಕುಶ್ ಬೈನ್ಸ್ (40) ಹಾಗೂ ಸಂಜು ಸ್ಯಾಮ್ಸನ್ (20) ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 24.4 ಓವರ್‌ಗಳಲ್ಲಿ 75 (ಮ್ಯಾಥ್ಯೂ ಶಾರ್ಟ್ 25, ದೀಪಕ್ ಹೂಡಾ 33ಕ್ಕೆ 2, ಅಭಿಮನ್ಯು ಲಂಬಾ 28ಕ್ಕೆ 2, ಕುಲದೀಪ್ ಯಾದವ್ 4ಕ್ಕೆ 2) ಭಾರತ: 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 76 (ಅಂಕುಶ್ ಬೈನ್ಸ್ ಔಟಾಗದೆ 40, ಸಂಜು ಸ್ಯಾಮ್ಸನ್ ಔಟಾಗದೆ 20, ಗಾಬ್ ಬೆಲ್ 15ಕ್ಕೆ 1) ಫಲಿತಾಂಶ: ಭಾರತಕ್ಕೆ 8 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ: ದೀಪಕ್ ಹೂಡಾ, ಸರಣಿ ಶ್ರೇಷ್ಠ: ವಿಜಯ್ ಜೋಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT