ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ವಿಜ್ಞಾನಿಗೆ ಧನ ಸಹಾಯ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್‌ (ಪಿಟಿಐ): ಮಿದುಳಿನ ಕಾರ್ಯನಿರ್ವಹಣೆ ಬಗ್ಗೆ ಸಂಶೋಧನೆ ನಡೆಸುವುದಕ್ಕಾಗಿ ಭಾರತ ಮೂಲದ ನರ­ವಿಜ್ಞಾನಿ ಖಲೀಲ್‌ ರಜಾಕ್‌ ಅವರಿಗೆ  8,66,902 ಡಾಲರ್‌ (ಸುಮಾರು ₨5.38 ಕೋಟಿ) ಧನ ಸಹಾಯ ದೊರೆತಿದೆ.

ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು (ಎನ್‌ಎಸ್‌ಎಫ್‌) ತನ್ನ ‘ಪ್ರಾಧ್ಯಾಪಕ ನೈಪುಣ್ಯ ಅಭಿವೃದ್ಧಿ ಕಾರ್ಯಕ್ರಮ’ದ ಅಡಿಯಲ್ಲಿ ರಜಾಕ್‌ ಅವರು ಮಾಡು­ತ್ತಿರುವ ಸಂಶೋಧನೆಗೆ ಐದು ವರ್ಷಗಳ ಅವಧಿಗೆ ಈ ಸಹಾಯ ಧನ ನೀಡಲಿದೆ.

ಚೆನ್ನೈ ಮೂಲದ ಖಲೀಲ್‌ ರಜಾಕ್‌ ಅವರು ಕ್ಯಾಲಿ­ಫೋರ್ನಿಯಾ ರಿವರ್‌­ಸೈಡ್‌ ವಿಶ್ವವಿದ್ಯಾಲಯದ ಮನೋ­ವಿಜ್ಞಾನ ಮತ್ತು ನರವಿಜ್ಞಾನ ವಿಭಾಗ­ದಲ್ಲಿ ಸಹಾಯಕ ಪ್ರಾಧ್ಯಾಪ­ಕ­ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT