ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಹಾಕಿ ತಂಡಕ್ಕೆ ರಿತು ರಾಣಿ ನಾಯಕಿ

Last Updated 3 ಫೆಬ್ರುವರಿ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು:  ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ತಂಡವನ್ನು ಬಲ ಗೊಳಿಸುವ ಉದ್ದೇಶದಿಂದ ಹಾಕಿ ಇಂಡಿಯಾ (ಎಚ್‌ಐ) ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿ ಮಾಡಿದೆ. ಈ ಪ್ರವಾಸಕ್ಕೆ ಬುಧವಾರ ರಾಷ್ಟ್ರೀಯ ಮಹಿಳಾ ತಂಡವನ್ನು ಪ್ರಕಟಿಸಿದೆ.

ಈ ಟೂರ್ನಿಯು ಫೆಬ್ರುವರಿ 20ರಿಂದ ಮಾರ್ಚ್‌ 1ರವರೆಗೆ ಹರಿಣ ಗಳ ನಾಡಿನ ವಿವಿಧ ಕ್ರೀಡಾಂಗಣಗಳಲ್ಲಿ ಜರುಗಲಿದೆ. ಪ್ರವಾಸದ ವೇಳೆ ಭಾರತ ತಂಡ ದಕ್ಷಿಣ ಆಫ್ರಿಕಾ, ಜರ್ಮನಿ ಮತ್ತು ಸ್ಕಾಟ್ಲೆಂಡ್‌ ತಂಡಗಳ ವಿರುದ್ಧವೂ ಪಂದ್ಯಗಳನ್ನು ಆಡಲಿದೆ.

ಮಿಡ್‌ಫೀಲ್ಡರ್‌ ರಿತು ರಾಣಿ ಪ್ರವಾಸದ ವೇಳೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಡಿಫೆಂಡರ್‌ ದೀಪಿಕಾ ಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ. ಭಾರತ ಈ ಪ್ರವಾಸದ ವೇಳೆ ಜರ್ಮನಿ, ದಕ್ಷಿಣ ಆಫ್ರಿಕಾ ಮತ್ತು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ತಂಡಗಳ ಎದುರು ತಲಾ ಎರಡು ಪಂದ್ಯಗಳನ್ನು ಆಡಲಿದೆ. ಜತೆಗೆ 21 ವರ್ಷ ದೊಳಗಿನವರ  ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ. ಈ ಪ್ರವಾಸಕ್ಕೆ ರಾಜ್ಯದ ಯಾರೊ ಬ್ಬರಿಗೂ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ದಕ್ಷಿಣ ಏಷ್ಯನ್‌ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದೆ. ಈ ಕೂಟದಲ್ಲಿ ಭಾರತಕ್ಕೆ ಶ್ರೀಲಂಕಾ ಮತ್ತು ನೇಪಾಳ ತಂಡಗಳ ಸವಾಲು  ಇದೆ.

‘ದಕ್ಷಿಣ ಏಷ್ಯನ್‌ ಕ್ರೀಡಾಕೂಟದ ಬಳಿಕ ನಾವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದೇವೆ. ಒಲಿಂಪಿಕ್ಸ್‌ಗೆ  ಸಜ್ಜುಗೊಳ್ಳಲು  ಈ ಪ್ರವಾಸ ವೇದಿಕೆ ಎನಿಸಿದೆ. ದ. ಅಫ್ರಿಕಾ, ಜರ್ಮನಿ ಮತ್ತು ಸ್ಕಾಟ್ಲೆಂಡ್‌ ಬಲಿಷ್ಠ ತಂಡಗಳು. ಇವುಗಳ ವಿರುದ್ಧ ಆಡು ವುದರಿಂದ ತಂಡದ ಆಟಗಾರ್ತಿಯರ ಮನೋಬಲವು ವೃದ್ಧಿಯಾಗಲಿದೆ’ ಎಂದು ತಂಡದ ಕೋಚ್‌ ನೀಲ್‌ ಹಾಗುಡ್‌ ತಿಳಿಸಿದ್ದಾರೆ.

‘36 ವರ್ಷಗಳ ಬಳಿಕ ನಾವು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದೇವೆ. ಈ ಕೂಟದಲ್ಲಿ ಪದಕದ ಸಾಧನೆ ಮಾಡು ವುದು ನಮ್ಮ ಗುರಿ. ಈ ಉದ್ದೇಶ ದಿಂದಲೇ ಹಲವು ಸರಣಿಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ತಂಡ ಇಂತಿದೆ:  ಗೋಲ್‌ಕೀಪರ್ಸ್‌:  ಸವಿತಾ ರಾಣಿ, ರಜನಿ ಎತಿಮರ್ಪು ಮತ್ತು ಯೋಗಿತಾ ಬಾಲಿ. ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ, ದೀಪಿಕಾ (ಉಪ ನಾಯಕಿ), ನಮಿತಾ ಟೊಪ್ಪೊ, ಜಸ್‌ಪ್ರೀತ್‌ ಕೌರ್‌, ಸುನಿತಾ ಲಾಕ್ರ, ಸುಶೀಲಾ ಚಾನು ಪುಖ್ರಾಂಬಮ್‌, ಗುರ್ಜಿತ್‌ ಕೌರ್‌ ಮತ್ತು ರಶ್ಮಿತಾ ಮಿಂಜ್‌. ಮಿಡ್‌ಫೀಲ್ಡರ್ಸ್‌:  ರಿತು ರಾಣಿ (ನಾಯಕಿ), ಲಿಲಿಮಾ ಮಿಂಜ್‌, ನವಜೋತ್‌ ಕೌರ್‌, ನಿಯಾಲುಮ್‌ ಲಾಲ್‌ ರೌತ್‌ ಫೆಲಿ, ರೇಣುಕಾ ಯಾದವ್‌, ಲಿಲಿ ಚಾನು ಮಯೆಂಗ್‌ಬಮ್‌, ನರೀಂದರ್‌ ಕೌರ್‌, ನಿಕ್ಕಿ ಪ್ರಧಾನ್‌ ಮತ್ತು ಮನ್‌ಪ್ರೀತ್‌ ಕೌರ್‌. ಫಾರ್ವರ್ಡ್ಸ್‌:  ರಾಣಿ ರಾಂಪಾಲ್‌, ಪೂನಮ್‌ ರಾಣಿ, ವಂದನಾ ಕಟಾರಿಯಾ, ಅನುರಾಧ ದೇವಿ ತೊಕೊಚೊಮ್‌, ಪ್ರೀತಿ ದುಬೇ ಮತ್ತು ನವಪ್ರೀತ್‌ ಕೌರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT