ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಆಸ್ಟ್ರೇಲಿಯಾದಿಂದ ಯುರೇನಿಯಂ- ಟೀಕೆಗೆ ಗುರಿ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಇನ್ನು ಕೆಲವು ವರ್ಷಗಳಲ್ಲಿ ಆಸ್ಟ್ರೇಲಿಯಾವು ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲಿದೆ ಎಂಬುದನ್ನು ವಿಕಿಲೀಕ್ಸ್  ಬುಧವಾರ ಬಹಿರಂಗಪಡಿಸಿದ ನಂತರ ಆಸ್ಟ್ರೇಲಿಯಾ ಲೇಬರ್ ಪಕ್ಷ ತೀವ್ರ ಟೀಕೆಗೆ ಗುರಿಯಾಗಿದೆ.ಭಾರತಕ್ಕೆ ರಹಸ್ಯವಾಗಿ ಯುರೇನಿಯಂ ಮಾರುವುದನ್ನು ಬೆಂಬಲಿಸಿರುವ ಬಗ್ಗೆ ವಿವರಣೆ ನೀಡುವಂತೆ ಆಸ್ಟ್ರೇಲಿಯಾದ ಆಡಳಿತಾರೂಢ ಲೇಬರ್ ಪಕ್ಷವನ್ನು ವಿರೋಧಿ ಗ್ರೀನ್ಸ್  ಪಕ್ಷ ಒತ್ತಾಯಿಸತೊಡಗಿದೆ.

ಸರ್ಕಾರದ ದ್ವಿಮುಖ ನೀತಿಯನ್ನು ಈ ವರದಿ ಬಯಲು ಮಾಡಿದೆ ಎಂದು ಗ್ರೀನ್ಸ್ ಪಕ್ಷದ ಪರಮಾಣು ವ್ಯವಹಾರಗಳ ಘಟಕದ ವಕ್ತಾರ ಸ್ಕಾಟ್ ಲುಡ್‌ಲಮ್ ಟೀಕಿಸಿದ್ದಾರೆ. ಈ ಸಂಬಂಧ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡುವಂತೆಯೂ ಅವರು ಆಗ್ರಹಿಸಿದ್ದಾರೆ. ಆದರೆ ಲೇಬರ್ ಪಕ್ಷದ ಸೆನೆಟರ್ ಡಾಗ್ ಕ್ಯಾಮೆರಾನ್ ಅವರು, ಭಾರತವು ಅಂತರರಾಷ್ಟ್ರೀಯ ಒಡಂಬಡಿಕೆಗೆ ಬದ್ಧವಾಗುವ ತನಕ ಅದರೊಂದಿಗೆ ಆಸ್ಟ್ರೇಲಿಯಾ ಯುರೇನಿಯಂ ವ್ಯಾಪಾರ ಮಾಡಬಾರದೆಂದು ಸೂಚಿಸಿದ್ದಾರೆ.

ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಯುರೇನಿಯಂ ಮಾರಾಟ ಮಾಡುವುದಕ್ಕೆ ನಿಷೇಧವಿದ್ದರೂ, ಇನ್ನು ಕೆಲವೇ ವರ್ಷಗಳಲ್ಲಿ ಈ ವರ್ಗಕ್ಕೆ ಸೇರಿದ ಭಾರತಕ್ಕೆ ಪರಮಾಣು ಇಂಧನವನ್ನು ಸರಬರಾಜು ಮಾಡುವ ಸಾಧ್ಯತೆ ಇರುವುದಾಗಿ ಆಸ್ಟ್ರೇಲಿಯಾದ ಸಂಪನ್ಮೂಲ ಸಚಿವ ಮಾರ್ಟಿನ್ ಫಗ್ಯುಸನ್ 2009ರಲ್ಲಿ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವಿಕಿಲೀಕ್ಸ್ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT