ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ನಾಲ್ಕು ಚಿನ್ನದ ಪದಕ

ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಮನಾರ್ಹ ಪ್ರದರ್ಶನ ನೀಡಿದ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್ ಟೂರ್ನಿಯ ಎರಡನೇ ದಿನ ನಾಲ್ಕು ಚಿನ್ನದ ಪದಕ ಜಯಿಸಿದ್ದಾರೆ.

ಭಾನುವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಜೂನಿಯರ್ ಬಾಲಕರ (ಹಂತ-2) ಫೈನಲ್‌ನಲ್ಲಿ ಭಾರತ 3-0ರಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿತು. ಸುಧಾಂಶು ಗ್ರೋವರ್ 11-5, 11-6, 11-6ರಲ್ಲಿ ವಿಮುಕ್ತಿ ವಿಜೆಸಿರಿ ಎದುರೂ, ಅಭಿಷೇಕ್ ಯಾದವ್ 11-9, 11-8, 8-11, 11-6ರಲ್ಲಿ ನಿರೋಶನ ಕಹಾವತಾತ ವಿರುದ್ಧವೂ, ರೋಹಿತ್ ರಾಜಶೇಖರ್ 11-6, 11-4, 11-6ರಲ್ಲಿ ದಿಲ್ಶಾನ್ ಏಕನಾಯಕ ಮೇಲೂ ಗೆಲುವು ಸಾಧಿಸಿದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡದವರು 3-0ರಲ್ಲಿ ನೇಪಾಳ ಎದುರು ಜಯ ಗಳಿಸಿದ್ದರು.

ಜೂನಿಯರ್ ಬಾಲಕಿಯರ (ಹಂತ-3) ಫೈನಲ್‌ನಲ್ಲಿ ಭಾರತದವರು 3-0ರಲ್ಲಿ ಶ್ರೀಲಂಕಾ ತಂಡವನ್ನು ಪರಾಭವಗೊಳಿಸಿದರು. ಸುತೀರ್ಥ ಮುಖರ್ಜಿ 11-8, 11-7, 11-5ರಲ್ಲಿ ತಾರಿಕಿ ಡಿ ಸಿಲ್ವರ್ ಎದುರೂ, ಮಾಣಿಕಾ ಬಾತ್ರಾ 11-4, 11-7, 11-5ರಲ್ಲಿ ಸಂಕಲ್ಪನಾ ಮೇಲೂ, ರೀತ್ ರಿಷಿಯಾ 11-3, 11-4, 11-8ರಲ್ಲಿ ಚಾಮತಸರಾ ಫರ್ನಾಂಡೊ ವಿರುದ್ಧವೂ ವಿಜಯ ಸಾಧಿಸಿದರು.

ಕೆಡೆಟ್ ಬಾಲಕರ (ಹಂತ-2) ವಿಭಾಗದ ಅಂತಿಮ ಪಂದ್ಯದಲ್ಲಿ ಭಾರತ ತಂಡದವರು 3-0ರಲ್ಲಿ ಲಂಕಾ ಎದುರು ಗೆದ್ದರು. ಬರ್ಡಿ ಬೋರೊ 11-4, 9-11, 11-8, 8-11, 11-8ರಲ್ಲಿ ಉದಯ ರಣಸಿಂಗೆ ಎದುರೂ, ಅನಿರ್ಬಾನ್ ಘೋಷ್ 11-7, 11-6, 11-5ರಲ್ಲಿ ಜಯಸಂಕಾ ಡಿಸಿಲ್ವಾ ವಿರುದ್ಧವೂ, ಅನಿರ್ಬಾನ್ ಘೋಷ್/ಲಾಲ್ರಿನ್ ಪೂಜಾ 11-3, 11-7, 11-9ರಲ್ಲಿ ಉದಯ ರಣಸಿಂಗೆ/ಪೂರ್ಣಿಮಾ ವರುಸವಿತಾನ ಮೇಲೂ ಜಯ ಗಳಿಸಿದರು.

ಇದಕ್ಕೂ ಮೊದಲು ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡದವರು 3-0ರಲ್ಲಿ ನೇಪಾಳ ಎದುರು ಗೆಲುವು ಸಾಧಿಸಿದ್ದರು.
ಕೆಡೆಟ್ ಬಾಲಕಿಯರ (ಹಂತ-3) ವಿಭಾಗದ ಫೈನಲ್‌ನಲ್ಲಿ ಭಾರತ 3-0ರಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತು. ಶ್ರೀಜಾ ಅಕುಲಾ 11-1, 12-10, 11-5ರಲ್ಲಿ ಪಾವನಿ ಸಿರಿಸೇನಾ ಎದುರೂ, ಸಾಗರಿಕಾ ಮುಖರ್ಜಿ 11-3, 11-5, 11-4ರಲ್ಲಿ  ರಿ ಕರದನಾರಾಚಿ ವಿರುದ್ಧವೂ, ಸಾಗರಿಕಾ/ಹರ್ಷವಧಿನಿ 11-2, 11-3, 11-9ರಲ್ಲಿ ಪಾವನಿ/ಕರದನಾರಾಚಿ ಎದುರೂ ಜಯ ಗಳಿಸಿದರು.

ಎರಡನೇ ದಿನದ ಸ್ಪರ್ಧೆಯಲ್ಲಿ ಶ್ರೀಲಂಕಾ ನಾಲ್ಕು ಕಂಚಿನ ಪದಕ ಜಯಿಸಿತು. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನೇಪಾಳ ಕಂಚಿನ ಪದಕ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT