ಮೆಲ್ಬರ್ನ್, (ಪಿಟಿಐ): ಆಸ್ಟ್ರೇಲಿಯಾವು ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವ ಮೂಲಕ ಎರಡು ರಾಷ್ಟ್ರಗಳ ಮಧ್ಯೆ ಕ್ಷಿಪ್ರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಬೇಕು ಎಂದು ವಿದೇಶಾಂಗ ಖಾತೆಯ ಮಾಜಿ ಕಾರ್ಯದರ್ಶಿ ಶಾಮಶರಣ್ ಹೇಳಿದರು.
`ಕ್ಷಿಪ್ರವಾಗಿ ಬೆಳೆಯುತ್ತಿರುವ ಬಾಂಧವ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು ಭಾರತಕ್ಕೆ ಯುರೇನಿಯಂ ಮಾರಾಟದ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲಿದೆ ಎಂಬ ಗಾಢ ವಿಶ್ವಾಸ ನಮಗಿದೆ~ ಎಂದು ಆಸ್ಟ್ರೇಲಿಯ-ಭಾರತ ವಾಣಿಜ್ಯ ಸಂಸ್ಥೆಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.