ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸ್ಟಿಂಗರ್ ಕ್ಷಿಪಣಿ ಪೂರೈಕೆ: ಅಮೆರಿಕ ಪ್ರಸ್ತಾವ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ವಾಯುಪಡೆಗೆ 22 ದಾಳಿ  ಹೆಲಿಕಾಪ್ಟರ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿರುವ ಅಮೆರಿಕವು, ಅದರಡಿಯಲ್ಲಿ ಆಗಸದಿಂದ ಆಗಸದತ್ತ ಮುನ್ನುಗ್ಗಬಲ್ಲ `ಸ್ಟಿಂಗರ್~ ಕ್ಷಿಪಣಿಗಳನ್ನು ಒದಗಿಸುವ ಪ್ರಸ್ತಾವ ಮುಂದಿಟ್ಟಿದೆ.

ಭಾರತವೇ ತಯಾರಿಸಿರುವ ಹೆಲಿಕಾಪ್ಟರ್‌ಗಳಿಗೆ ಕೂಡ ಈ ಕ್ಷಿಪಣಿಗಳನ್ನು ಪೂರೈಸುವ ಬಗ್ಗೆ ನಾವು ಚಿಂತಿಸುತ್ತಿದ್ದೇವೆ. ಎಚ್‌ಎಎಲ್ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ ಹಾಗೂ ಸುಧಾರಿತ ಲಘು ಯುದ್ಧ ಹೆಲಿಕಾಪ್ಟರ್‌ಗಳು ಕೂಡ ಈ ಪಟ್ಟಿಯಲ್ಲಿವೆ ಎಂದು ಇದನ್ನು ಸರಬರಾಜು ಮಾಡಲಿರುವ ರೇಥಿಯಾನ್ಸ್ ಕಂಪೆನಿಯ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ ಬ್ರ್ಯಾಡ್ ಬರ್ನಾರ್ಡ್ ತಿಳಿಸಿದ್ದಾರೆ.

1980ರ ದಶಕದ ಆಘ್ಘಾನಿಸ್ತಾನ ಕದನದ ಸಂದರ್ಭದಲ್ಲಿ ಭೂಮಿಯಿಂದ ಆಗಸಕ್ಕೆ ಚಿಮ್ಮವ ಮಾದರಿಯ ಇದೇ ಕ್ಷಿಪಣಿ ರಷ್ಯಾದ ಹೆಲಿಕಾಪ್ಟರ್‌ನ್ನು ಹೊಡೆದುರುಳಿಸಿತ್ತು. 1999ರಲ್ಲಿ ಕಾರ್ಗಿಲ್ ಯುದ್ಧದಲ್ಲೂ ಈ ಕ್ಷಿಪಣಿಯನ್ನು ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT