ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸ್ವೀಡನ್‌ ಬೆಂಬಲ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ
Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌ (ಪಿಟಿಐ): ಪುನರ್‌ರಚನೆಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದುವ ಭಾರತದ ಪ್ರಯತ್ನಕ್ಕೆ ಸ್ವೀಡನ್‌ ಬೆಂಬಲ ವ್ಯಕ್ತಪಡಿಸಿದ್ದು, ಭಾರತವು ತನ್ನ ಸಾಮರ್ಥ್ಯ ಮತ್ತು ಬೆಳವಣಿಗೆಯ ದೃಷ್ಟಿಯಿಂದ ‘ಸಹಜ ಹಕ್ಕುದಾರ’ ರಾಷ್ಟ್ರ ಎಂದು ಅದು ಬಣ್ಣಿಸಿದೆ.

ಅಲ್ಲದೆ, 34 ರಾಷ್ಟ್ರಗಳನ್ನು ಒಳಗೊಂಡ ಸ್ವತಂತ್ರ ಸಂಘಟನೆಯಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯೊಳಗೆ (ಎಂಟಿಸಿಆರ್‌) ಪ್ರವೇಶ ಪಡೆಯುವ ಭಾರತದ ಪ್ರಯತ್ನವನ್ನೂ ಸ್ವೀಡನ್‌ ಬೆಂಬಲಿಸಿದೆ.

ಸ್ವೀಡನ್‌ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸೋಮವಾರ ಸ್ಟಾಕ್‌ಹೋಮ್‌ನಲ್ಲಿ ಭಾಗವಹಿಸಿದ್ದ ಸಭೆಯಲ್ಲಿ ಪ್ರಧಾನಿ ಸ್ಟೀಫನ್‌ ಲೋಫವೆನ್‌ ಅವರು ಭಾರತದ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಪ್ರಕಟಿಸಿದರು.

ಪ್ರಣವ್‌ ಮುಖರ್ಜಿ ಅವರ ಭೇಟಿಯ ವೇಳೆ ಭಾರತ ಮತ್ತು ಸ್ವೀಡನ್‌ ಹಲವು ಒಪ್ಪಂದಗಳಿಗೆ ಸಹಿ ಹಾಕಿದವು.

ಶೀಘ್ರ ಇ ವೀಸಾ: ಸ್ವೀಡನ್‌ ಪ್ರಜೆಗಳಿಗೆ ಭಾರತವು ಶೀಘ್ರವೇ ಇ-ವೀಸಾ ಸೌಲಭ್ಯವನ್ನು ಒದಗಿಸಲಿದೆ ಎಂದು ಮಂಗಳವಾರ ಘೋಷಿಸಿದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು, ಭಾರತದ ಮಹತ್ವಾಕಾಂಕ್ಷೆಯ ‘ಭಾರತದಲ್ಲೇ ತಯಾರಿಸಿ’ಯಂತಹ ಕಾರ್ಯಕ್ರಮಗಳಲ್ಲಿ ಕೈಜೋಡಿಸುವಂತೆ ದೇಶಕ್ಕೆ ಕರೆ ನೀಡಿದರು.

‘ಭಾರತ ಮತ್ತು ಸ್ವೀಡನ್‌: ಉಜ್ವಲ ಭವಿಷ್ಯದ ಸಹ ನಿರ್ಮಾಣ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿ, ಭಾರತ ಇ-ಟೂರಿಸ್ಟ್‌ ವೀಸಾ ಒದಗಿಸಲಿರುವ ದೇಶಗಳ ಪಟ್ಟಿಯಲ್ಲಿ ಸ್ವೀಡನ್‌ ಕೂಡಾ ಸೇರಲಿದೆ ಎಂದು  ಪ್ರಕಟಿಸಿದರು.

ಭಾರತೀಯ ಭೋಜನ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಂಗಳವಾರ ಸ್ವೀಡನ್‌ನ ರಾಜ ಕಾರ್ಲ್‌ ಗುಸ್ತಾಫ್‌ ಮತ್ತು ರಾಣಿ ಸಿಲ್ವಿಯಾ ಅವರಿಗೆ ಭೋಜನ ಕೂಟ ಏರ್ಪಡಿಸಿದ್ದರು. ಭಾರತದಲ್ಲಿ ಜನಸಾಮಾನ್ಯರ ಮನಗೆದ್ದಿರುವ ರಸ್ತೆ ಬದಿಯ ತಿನಿಸುಗಳ ಸವಿಗೆ ಸ್ವೀಡನ್‌ ರಾಜವಂಶಸ್ಥರು ಮಾರುಹೋದರು.

‘ಭಾರತೀಯ ಬೀದಿ ಬದಿ ಆಹಾರ’ದ ಮೂಲಕ ಸ್ವೀಡನ್‌ನಲ್ಲಿ ಹೆಸರಾಗಿರುವ ಬಾಣಸಿಗ ಧೀರಜ್‌ ಸಿಂಗ್‌ ಅವರು ಭೋಜನಕೂಟದ ಪ್ರಮುಖ ಬಾಣಸಿಗರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT