ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಇಬ್ಬಂದಿತನ: ಪಾಸ್ಕಲ್‌ ಆಕ್ಷೇಪ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ರಾಜ­ತಾಂ­ತ್ರಿಕ ಅಧಿಕಾರಿ ದೇವ­ಯಾನಿ ಖೋಬ್ರಾ­­ಗಡೆ ಅವರ ವಿಚಾರದಲ್ಲಿ ಅಮೆರಿಕ ನಡೆ­ದು­­ಕೊಂಡ ರೀತಿ ಹಾಗೂ ನನ್ನೊಂ­ದಿಗೆ ಸ್ಥಳೀಯ ಪೊಲೀ­ಸರು ನಡೆದು­ಕೊಂಡ ರೀತಿ ಎರಡೂ ಒಂದೇ. ಬೇರೆ ದೇಶ­ಗಳಲ್ಲಿ ತನ್ನ ರಾಜತಾಂತ್ರಿಕ ಅಧಿ­ಕಾರಿ­ಗಳಿಗೆ ಅನ್ಯಾಯ­ವಾದಾಗ ಪ್ರತಿಭ­ಟಿಸುವ ಭಾರತ, ತನ್ನ ನೆಲದಲ್ಲೇ ಆದ ಅನ್ಯಾಯಗಳ ಬಗ್ಗೆ ಮೌನವಹಿಸು­ವುದೇಕೆ’ ಎಂದು ಫ್ರೆಂಚ್  ಕಾನ್ಸುಲ್ ಕಚೇರಿಯ ಮಾಜಿ ಕಿರಿಯ ಅಧಿಕಾರಿ ಪಾಸ್ಕಲ್ ಮಜುರಿಯರ್ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾ­ಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ನಾನು ಮಗಳ ಮೇಲೆ ಅತ್ಯಾಚಾರ ಎಸಗಿ­ರುವುದು ಸುಳ್ಳು. ಇದಕ್ಕೆ ಡಿಎನ್‌ಎ ಪರೀಕ್ಷೆಯ ವರ­ದಿಯೇ ಸಾಕ್ಷಿ. ಆದರೂ ನಾನು ನಿರಪರಾಧಿ ಎಂದು ತೀರ್ಪು ನೀಡುವಲ್ಲಿ  ವಿಳಂಬವಾಗುತ್ತಿದೆ’ ಎಂದು ಆರೋಪಿಸಿದರು.

‘ರಾಜತಾಂತ್ರಿಕ ವಿಷಯಗಳಲ್ಲಿ ತ್ವರಿತವಾಗಿ ನ್ಯಾಯದಾನ­ವಾಗಬೇಕು ಎಂದು ಹೇಳುತ್ತಿರುವ ಭಾರತದೊಳಗೇ ನ್ಯಾಯ­­ದಾನ ವಿಳಂಬವಾಗುತ್ತಿದೆ. ತನ­ಗೊಂದು ನ್ಯಾಯ ಇತರ­ರಿಗೆ ಒಂದು ನ್ಯಾಯ ಎಂಬ ಭಾರತದ ಈ ಇಬ್ಬಂದಿ­ತನ ಸರಿಯಲ್ಲ’ ಎಂದು ದೂರಿದರು.

‘ದೇವಯಾನಿ ಖೋಬ್ರಾಗಡೆ ಅವ­ರನ್ನು ಅಮೆರಿಕ ಪೊಲೀ­-ಸರು ನಡೆಸಿ­ಕೊಂಡ ರೀತಿಯಲ್ಲೇ ಸ್ಥಳೀಯ ಪೊಲೀ­ಸರು ನನ್ನನ್ನು ನಡೆಸಿಕೊಂಡಿದ್ದಾರೆ. ನನ್ನನ್ನು ಬಂಧಿಸಿ ಅಮಾನ­ವೀ­ಯ­ವಾಗಿ ಎಳೆದೊಯ್ದು ಮದ್ಯವ್ಯಸನಿಗಳಿದ್ದ ಸೆಲ್‌­ನಲ್ಲಿ ಇಟ್ಟಿದ್ದರು. ಸೆಲ್‌ನಲ್ಲಿ ಬರಿಯ ನೆಲದ ಮೇಲೆ ಮಲಗುವ ಪರಿ­ಸ್ಥಿತಿ ಇತ್ತು. ನಾನೊಬ್ಬ ರಾಜತಾಂತ್ರಿಕ ಅಧಿಕಾರಿ ಎಂಬುದು ತಿಳಿದಿದ್ದೂ ಈ ರೀತಿ ವರ್ತಿಸಿದರು’ ಎಂದರು.

ಒಂದು ಬಾರಿಯೂ..
ಮೊಮ್ಮಕ್ಕಳನ್ನು ನೋಡ­ಬೇಕೆಂದು ಮೂರು ಬಾರಿ ಫ್ರಾನ್ಸ್‌­ನಿಂದ ಬೆಂಗಳೂರಿಗೆ ಬಂದೆ. ಆದರೆ, ಒಂದು ಬಾರಿಯೂ ಮಕ್ಕಳನ್ನು ನೋಡಲು ಸುಜಾ ಜೋನ್ಸ್ ಅವಕಾಶ ನೀಡಲಿಲ್ಲ. ಈ ಬಾರಿ ಕ್ರಿಸ್‌­ಮಸ್‌ ಉಡುಗೊರೆ ನೀಡಲು ನಗ­ರಕ್ಕೆ ಬಂದಿದ್ದೇನೆ. ಆದರೆ, ಆಕೆ ಈ ಬಾರಿಯೂ ಅವಕಾಶ ಕೊಡುತ್ತಿಲ್ಲ.
–ಜಾಕಿ, ಪಾಸ್ಕಲ್‌ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT