ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕೋಟಿ ವೀರರು

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

1, ಮಲ್ವಿಂದರ್ ಹಾಗೂ ಶಿವಿಂದರ್ ಸಿಂಗ್

ಆಸ್ತಿ ಮೌಲ್ಯ: 1220 ಕೋಟಿ ರೂಪಾಯಿ
ವಯಸ್ಸು: 37 (ಮಲ್ವಿಂದರ್), 35 (ಶಿವಿಂದರ್)
ಈ  ಇಬ್ಬರು ಸೋದರರು ಡ್ಯೂಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ರ‌್ಯಾನ್‌ಬ್ಯಾಕ್ಸಿ ಲ್ಯಾಬೋರೇಟರಿ ಎಂಬ ಔಷಧ ತಯಾರಿಕಾ ಕಂಪನೆಯ ಮಾಲೀಕರು. ಡಾ. ಪರ್ವಿಂದರ್ ಸಿಂಗ್ ಮಗನಾದ ಮಲ್ವಿಂದರ್ ಸಿಂಗ್ ಈ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ. ಇವರ ಸೋದರನಾದ ಶಿವಿಂದರ್ ಸಿಂಗ್ ವಿಶ್ವದ ಮೊದಲ 20 ಶ್ರೀಮಂತರಲ್ಲಿ ಸ್ಥಾನ ಪಡೆದ ಧನಿಕ.

 ಔಷಧ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಅತ್ಯಂತ ಪ್ರಸಿದ್ಧ ಕುಟುಂಬದ ಹಿನ್ನೆಲೆಯಿಂದ ಬಂದ ಈ ಸೋದರರು, ತಮ್ಮ ತಂದೆಯ ಕನಸಿನ ಕೂಸಾದ ಪೋಲ್ ಸ್ಟಾರ್ ಎಂಬ ಕಂಪೆನಿಯನ್ನು ಜಾಪನಿನ ಡಾಯ್-ಇಚಿ ಸಾಂಕ್ಯೋ ಎಂಬ ಕಂಪೆನಿಗೆ 10 ಸಾವಿರ ಕೋಟಿಗೆ ಮಾರಿದರು. ನಂತರ ಔಷಧ ತಯಾರಿಕೆಯಲ್ಲಿ ವಿಶ್ವದಲ್ಲೇ ನಂ.1 ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದವರು.

2,ಅನುರಾಗ್ ದೀಕ್ಷಿತ್

ಆಸ್ತಿ ಮೌಲ್ಯ: 780 ಕೋಟಿ ರೂಪಾಯಿ
ವಯಸ್ಸು: 38
ಎಂಜಿನಿಯರಿಂಗ್ ಓದಿದ ಅನುರಾಗ್ ನಂತರ ಜೂಜುಕೋರರಿಗಾಗಿ ಅಡ್ಡ ತಯಾರಿಸಿ `ಗ್ಯಾಂಬ್ಲಿಂಗ್ ಮೊಗಲ್~ ಎಂದೇ ಖ್ಯಾತರಾದವರು. ಐಐಟಿ ದೆಹಲಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವರಿ ಪಡೆದ ಅನುರಾಗ್ ಅವರ ಮೊದಲ ಕೆಲಸ ಸಿಎಂಸಿ ಕಂಪೆನಿಯಲ್ಲಿ. ನಂತರ ವೆಬ್‌ಸಿ, ಎಟಿ ಅಂಡ್ ಟಿನಲ್ಲೂ ಕೆಲಸ ಮಾಡಿದ ಅನುಭವ ಅವರದ್ದು.

ಅನುರಾಗ್ ತಮ್ಮ 25ನೇ ವಯಸ್ಸಿನಲ್ಲಿ ಪಾರ್ಟಿಗೇಮಿಂಗ್ ಸ್ಥಾಪಿಸಿದರು. ಕಂಪೆನಿಗಳ ಬೆಟ್ಟಿಂಗ್ ಸಾಫ್ಟ್‌ವೇರ್ ಒಂದರನ್ನು ಅವರು ಬರೆದರು. ಈ ಸಾಫ್ಟ್‌ವೇರ್ ಮೂಲಕ ದೇಶ ವಿದೇಶಗಳ ಜೂಜುಕೋರರು ಪರಸ್ಪರ ಆಡಬಹುದಾದ ಒಂದು ಪ್ರಸಿದ್ಧ ತಾಣ ಇದಾಯಿತು. ಆರ್ಥಿಕ ಸಂಕಷ್ಟದಲ್ಲಿದ್ದ ಅಮೆರಿಕ ಆನ್‌ಲೈನ್ ಬೆಟ್ಟಿಂಗ್‌ಗಳಿಗೆ ಕಡಿವಾಣ ಹಾಕು ಸಲುವಾಗಿ ಹೊಸತೊಂದು ಕಾನೂನು ತಂದಾಗ ಅನುರಾಗ್ ತನ್ನ ಬಳಿ ಇದ್ದ ಎಲ್ಲಾ ಷೇರುಗಳನ್ನು ಮಾರಿ ಮಂಡಳಿಯಿಂದ ಹೊರ ಬಂದರು. ಈಗಲೂ ಆ ಕಂಪೆನಿಯಲ್ಲಿ ಇವರದ್ದೇ ಅಧಿಕ ಪಾಲು.
 

3,ಗಿರೀಶ್ ತಂತಿ

ಆಸ್ತಿ ಮೌಲ್ಯ: 635 ಕೋಟಿ ರೂಪಾಯಿ
ವಯಸ್ಸು: 40

ನಾಲ್ವರು ತಂತಿ ಸಹೋದರರಲ್ಲಿ ಗಿರೀಶ್ ತಂತಿಯೂ ಒಬ್ಬರು. ಪವನ ವಿದ್ಯುತ್ ಕ್ಷೇತ್ರದಲ್ಲಿ ತಂತಿ ಅವರದ್ದು ದೊಡ್ಡ ಹೆಸರು. ಸುಝ್ಲಾನ್ ಎನರ್ಜಿ ಎಂಬ ಜಗತ್ತಿನಲ್ಲೇ ಸುಪ್ರಸಿದ್ಧ ಪವನ ವಿದ್ಯುತ್ ಕಂಪೆನಿಯಲ್ಲಿ ಗಿರೀಶ್ ತಂತಿ ಅವರು ಶೇ 12ರಷ್ಟು ಪಾಲುದಾರಿಕೆ ಹೊಂದಿದ್ದಾರೆ. ಇದರೊಂದಿಗೆ ಜವಳಿ ಕ್ಷೇತ್ರದಲ್ಲೂ ತಂತಿ ಅವರು ತಮ್ಮ ಯಶಸ್ಸನ್ನು ಸಾಧಿಸಿದ್ದಾರೆ.

ಪುಣೆ, ಸಿಂಗಾಪುರ್, ಆಸ್ಟ್ರೇಲಿಯಾ ಹೀಗೆ ಹಲವಾರು ಕಡೆ ಗಿರೀಶ್ ತಂತಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದ್ದಾರೆ. 1995ರಲ್ಲಿ ವ್ಯವಸ್ಥಾಪಕ ಹುದ್ದೆ ಅಲಂಕರಿಸಿದ ತಂತಿ ಅವರು ಸ್ಥಳೀಯವಾಗಿ ಬಳಕೆಯಲ್ಲಿದ್ದ ಪವನ ವಿದ್ಯುತ್ ಯಂತ್ರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಕಷ್ಟು ಬೆವರು ಹರಿಸಿದ್ದಾರೆ.

 ಯುನೈಟೆಡ್ ಕಿಂಗ್‌ಡಂನ ಗಾಲ್ಮರ್ಗಾನ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ಮೆಂಟ್ ಪದವಿ ಪಡೆದಿರುವ ಗಿರೀಶ್ ತಂತಿ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಪದವಿ ಪಡೆದಿದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ.

4,ಸಮೀರ್ ಗೆಹ್ಲೋಟ್

ಆಸ್ತಿ ಮೌಲ್ಯ: 586 ಕೋಟಿ ರೂಪಾಯಿ
ವಯಸ್ಸು: 36
ಯಾವ ಪೂರ್ವಿಕರ ಆಸ್ತಿಯನ್ನು ಅನುಭವಿಸದೇ ಸ್ವಂತ ಶ್ರಮದಿಂದ ಕೋಟ್ಯಾಧಿಪತಿಯಾದ ಸಮೀರ್ ಗೆಹ್ಲೋಟ್ ಶತಕೋಟಿ ಸರದಾರರಲ್ಲಿ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆ ಇವರದ್ದು. ದೆಹಲಿಯ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಸಮೀರ್ ತನ್ನ ಇಬ್ಬರು ಸಹಪಾಠಿಗಳ ಜತೆಗೂಡಿ ಇಂಡಿಯಾಬುಲ್ ಎಂಬ ಆನ್‌ಲೈನ್ ಷೇರು ವಹಿವಾಟು ಕಂಪೆನಿ ತೆರೆದರು (ಈ ಕಂಪೆನಿಯಲ್ಲಿ ಉಕ್ಕು ತಯಾರಕ ಲಕ್ಷ್ಮೀ ಮಿತ್ತಲ್ ಕೂಡಾ ಒಬ್ಬರಾಗಿದ್ದರು). ಇದೇ ಸಮೂಹ ನಂತರ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಕಾಲಿರಿಸಿತು.
 
ಮುಂಬೈನ ಸಾರ್ವಜನಿಕ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದ ಕಂಪೆನಿ ನಂತರ ವಾಣಿಜ್ಯ ಕಟ್ಟಡ ಹಾಗೂ ಮಾಲ್‌ಗಳ ನಿರ್ಮಾಣಕ್ಕೂ ಕೈಹಾಕಿ ಸೈ ಎನಿಸಿಕೊಂಡಿತು.
ಭಾರತ ಮಾತ್ರವಲ್ಲದೇ ಸಿಂಗಾಪುರ್‌ನಲ್ಲೂ ನಿರ್ಮಾಣ ಕ್ಷೇತ್ರದಲ್ಲಿ ಹಣ ತೊಡಗಿಸಿದ ಸಮೀರ್ ಗೆಹ್ಲೋಟ್ ಮಾಲೀಕತ್ವದ ಕಂಪೆನಿ ನಂತರ ಸೀಸಿಯೆಟ್ ಜನರಲೀ ಜತೆಗೂಡಿ ಜೀವ ವಿಮೆಯನ್ನೂ ಆರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT