ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಟೆಕ್ಕಿಗೆ ಒಂಬತ್ತು ತಿಂಗಳು ಜೈಲು ಶಿಕ್ಷೆ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ವಿಮಾನದಲ್ಲಿ ಪ್ರಯಾಣಿಸುವಾಗ ಅಮೆರಿಕದ 66 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತದ ಟೆಕ್ಕಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.  ಶಿಕ್ಷೆಯ ಅವಧಿ ಮುಗಿದ ಬಳಿಕವೇ ಭಾರತಕ್ಕೆ ತೆರಳಬೇಕು ಎಂದು ಸೂಚಿಸಿದೆ.

ಸಾಫ್ಟ್‌ವೇರ್‌ ಸಲಹೆಗಾರ ಶ್ರೀನಿವಾಸ ಎಸ್‌.ಎರ್ರಾಮಿಲ್ಲಿ (46) ಶಿಕ್ಷೆಗೆ ಒಳ­ಗಾಗಿದ್ದು, ಜತೆಗೆ  ಐದು ಸಾವಿರ ಡಾಲರ್‌ (ಸುಮಾರು ರೂ 3.25 ಲಕ್ಷ) ದಂಡ ವಿಧಿಸ­ಲಾಗಿದೆ. ಅಲ್ಲದೇ ಒಂದು ವರ್ಷ ನ್ಯಾಯಾಲಯದ ನಿಗಾದಲ್ಲಿ ಇರಬೇಕಾಗುತ್ತದೆ.

2011ರ ಜೂನ್‌ 14ರಂದು ಸೌತ್‌ವೆಸ್ಟ್ ಏರ್‌ಲೈನ್ಸ್‌ ವಿಮಾನದಲ್ಲಿ  ಷಿಕಾಗೊ ಮಿಡ್ ವೇ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಎರ್ರಾಮಿಲ್ಲಿ ಕೊನೆಯವರಾಗಿ ವಿಮಾನ ಏರಿದರು.

ಇದೇ ವಿಮಾನದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ ತನ್ನ ಪತಿಯ ಪಕ್ಕದ ಆಸನದಲ್ಲಿ ಕುಳಿತು ಲಾಸ್‌ ವೆಗಾಸ್‌ಗೆ ಪ್ರಯಾಣಿಸುತ್ತಿದ್ದರು.
ಆಕೆ ಕಿಟಕಿ ಪಕ್ಕದ ಆಸನದಲ್ಲಿ  ಕುಳಿತಿದ್ದರು. ಪತಿ  ಕೊನೆಯಲ್ಲಿ ಕುಳಿತಿದ್ದರು. ಇವರಿಬ್ಬರ ನಡುವಿನ ಆಸನದಲ್ಲಿ ಶ್ರೀನಿವಾಸ ಎರ್ರಾಮಿಲ್ಲಿ ಕುಳಿತರು.

ಈ ವೇಳೆ ಮಾರ್ಗಮಧ್ಯೆ ಮಹಿಳೆಗೆ ಮೂರು ಬಾರಿ ಎರ್ರಾಮಿಲ್ಲಿ  ಲೈಂಗಿಕ ಕಿರುಕುಳ ನೀಡಿದರು ಎಂದು ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ನ್ಯಾಯಾ ಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆ­ಸಿದ ನ್ಯಾಯಾಲಯ ಶ್ರೀನಿ ವಾಸ್‌ ವಿರುದ್ಧದ ಆರೋಪ ದೃಢಪಟ್ಟಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT