ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪ್ರವಾಸಿಗರಿಗೆ ಒಂದೇ ವೀಸಾ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾಂಪೇನ್(ಐಎಎನ್‌ಎಸ್): ಕಾಂಬೋಡಿಯಾ ಮತ್ತು ಥಾಯ್ಲೆಂಡ್ ತಮ್ಮ ದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದೇ ವೀಸಾ ನೀಡುವ ಯೋಜನೆಯನ್ನು ಗುರುವಾರ ಜಾರಿ ಮಾಡಿವೆ. ಇಂತಹ ವೀಸಾವನ್ನು ಭಾರತವೂ ಸೇರಿದಂತೆ 35 ರಾಷ್ಟ್ರಗಳ ಪ್ರವಾಸಿಗರು ಪಡೆಯಲು ಅರ್ಹರು ಎಂದು ಕಾಂಬೋಡಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

`ಯೇಯವಾಡಿ- ಚಾಒಫ್ರಿಯ- ಮೆಕಾಂಗ್ ಆರ್ಥಿಕ ಸಹಕಾರ ಕಾರ್ಯತಂತ್ರ' (ಎಸಿಎಂಇಸಿಎಸ್) ಕಾರ್ಯಕ್ರಮದಡಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. `ಆಸಿಯಾನ್' ಒಕ್ಕೂಟದ ಐದು ರಾಷ್ಟ್ರಗಳಾದ ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಥಾಯ್ಲೆಂಡ್‌ಗಳು 2003ರಲ್ಲಿ `ಎಸಿಎಂಐಸಿಎಸ್' ಕಾರ್ಯಕ್ರಮ ರೂಪಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT