ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬಾಲಕಿಯರಿಗೆ ಚಿನ್ನ

ಟೇಬಲ್ ಟೆನಿಸ್: ಬೆಳ್ಳಿಗೆ ತೃಪ್ತಿಪಟ್ಟ ಬಾಲಕರ ತಂಡ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯುವ ಆಟಗಾರ್ತಿ ಸುತೀರ್ಥಾ ಮುಖರ್ಜಿ ನೇತೃತ್ವದ ಭಾರತ ಬಾಲಕಿಯರ ತಂಡ ಸ್ಲೋವಾಕಿಯಾದಲ್ಲಿ ನಡೆದ ಸ್ಲೊವಾಕ್ ಜೂನಿಯರ್ ಓಪನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಜಯಿಸಿದರೆ, ಬಾಲಕರ ತಂಡ ಬೆಳ್ಳಿ ಗೆದ್ದುಕೊಂಡಿತು.

ಶುಕ್ರವಾರ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತದ ಬಾಲಕಿಯರು 3-2ರಲ್ಲಿ ಸರ್ಬಿಯಾ `ಎ' ತಂಡವನ್ನು ಮಣಿಸಿ ಈ ಸಾಧನೆ ಮಾಡಿದರು. ಮೊದಲ ಸಿಂಗಲ್ಸ್‌ನಲ್ಲಿ ಭಾರತದ ಮಾಣಿಕಾ ಬಾತ್ರಾ 7-11, 3-11, 11-4, 11-4, 15-13ರಲ್ಲಿ ಅನ್ನಾ ಫೆನ್ನಿವಿಸಿ ಎದುರು ಗೆಲುವು ಪಡೆದು ಆರಂಭಿಕ ಮುನ್ನಡೆ ತಂದುಕೊಟ್ಟರು. ಮತ್ತೊಂದು ಸಿಂಗಲ್ಸ್‌ನಲ್ಲಿ ರೀತ್ 3-1ರಲ್ಲಿ ವಿಕ್ಟೋರಿಯಾ ತೃಸಿನ್‌ಕೀ ಎದುರು ಗೆಲುವು ಸಾಧಿಸಿ ಮುನ್ನಡೆಯನ್ನು 2-0ರಲ್ಲಿ ಹೆಚ್ಚಿಸಿದರು.

ಇನ್ನೊಂದು ಮಹತ್ವದ ಸಿಂಗಲ್ಸ್‌ನಲ್ಲಿ 15 ವರ್ಷದ ಸುತೀರ್ಥಾ 8-11, 11-9, 8-11, 11-2, 16-14ರಲ್ಲಿ ಅನೆತಾ ಮಾಕಸುತಿ ಅವರನ್ನು ಮಣಿಸಿ ಭಾರತಕ್ಕೆ ಬಂಗಾರ ಖಚಿತಪಡಿಸಿದರು.

ಬಾಲಕರಿಗೆ ಬೆಳ್ಳಿ: ಭಾರತದ ಬಾಲಕರ ತಂಡದವರು ಪ್ರಶಸ್ತಿ ಘಟ್ಟದ ಹೋರಾಟದಲ್ಲಿ 1-3ರಲ್ಲಿ ಜೆಕ್ ಗಣರಾಜ್ಯದ ಎದುರು ಸೋಲು ಕಂಡರು. ಬಾಲಕರ ತಂಡದ ಸುಧಾನ್ಶು ಗ್ರೋವರ್ ಮತ್ತು ಅಭಿಷೇಕ್ ಯಾದವ್ ಮೊದಲ ಸಿಂಗಲ್ಸ್‌ಗಳಲ್ಲಿ ನಿರಾಸೆ ಅನುಭವಿಸಿದರು. ರೋಹಿತ್ ರಾಜಶೇಖರ್ 3-2ರಲ್ಲಿ ಜಿಕ್ ಗಣರಾಜ್ಯದ ತಿಬೊರ್ ಪಾವಿಲಿಕ್ ಎದುರು ಗೆಲುವು ಪಡೆದು ಭಾರತದ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ, ರಿವರ್ಸ್ ಸಿಂಗಲ್ಸ್‌ನಲ್ಲಿ ಅಭಿಷೇಕ್ 1-3ರಲ್ಲಿ ಡೇವಿಡ್ ಎದುರು ಸೋಲು ಅನುಭವಿಸಿದ ಕಾರಣ ಭಾರತ ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT