ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಸಾಲೆ ಮೇಲೆ ಕೆಂಗಣ್ಣು

ಸ್ಯಾಲ್ಮೆನಲ್ ಬ್ಯಾಕ್ಟೀರಿಯಾ: ಅಮೆರಿಕ ಆತಂಕ
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭೇದಿ, ಜ್ವರ ಮತ್ತು ಹೊಟ್ಟೆನೋವಿಗೆ ಕಾರಣವಾಗುವ ಸ್ಯಾಲ್ಮೆನಲ್ ಬ್ಯಾಕ್ಟೀರಿಯಾ ಮಿಶ್ರಣವಾಗಿದೆ ಎನ್ನುವ ಕಾರಣಕ್ಕೆ ಭಾರತದಿಂದ ಆಮದಾಗುತ್ತಿರುವ ಆಹಾರ ಮತ್ತು ಸಾಂಬಾರು ಪದಾರ್ಥಗಳು ಅಮೆರಿಕಾದ ಆರೋಗ್ಯ ಕಾವಲು ಪಡೆ ಎಫ್‌ಡಿಎ ( ಫೆಡರಲ್ ಡ್ರಗ್ ಅಡ್ಮಿನಿಸ್ಟ್ರೇಶನ್) ಪರಿಶೀಲನೆಗೆ ಒಳಗಾಗಿವೆ.

ಈ ಕಾರಣದಿಂದಾಗಿ ಅಮೆರಿಕಾಕ್ಕೆ 2009ರಿಂದ 13ರವರೆಗೆ ಆಹಾರ ರಫ್ತು ಮಾಡುತ್ತಿದ್ದ ಭಾರತೀಯ ಮೂಲದ ಸುಮಾರು 200 ಸಂಸ್ಥೆಗಳನ್ನು  ಎಫ್‌ಡಿಎ `ಕೆಂಪುಪಟ್ಟಿ'ಗೆ ಸೇರಿಸಿದೆ.

ಎಫ್‌ಡಿಎ ಪ್ರಕಾರ ಬ್ಯಾಕ್ಟೀರಿಯಾ ಮಿಶ್ರಣಗೊಂಡಿರುವ ಆಹಾರ ಮತ್ತು ಸಾಂಬಾರು ಪದಾರ್ಥಗಳಲ್ಲಿ ಮೀನು,  ಗೋಮಾಂಸ, ಕೋಳಿ ಮೊಟ್ಟೆ, ತರಕಾರಿ, ದೊಡ್ಡ ಮೆಣಸು, ಜಿರಿಗೆ, ಕೊತ್ತುಂಬರಿ ಬೀಜ, ಹಳದಿ, ಸೊಪ್ಪು, ತುಳಸಿ ಮತ್ತು ಕಾಳು ಮೆಣಸು ಸೇರಿದೆ.
ಏತನ್ಮಧ್ಯೆ ಈ ಆಮದು ಪದಾರ್ಥಗಳಲ್ಲಿ ಎಷ್ಟು ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಮಿಶ್ರಣಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಲು ಎಫ್‌ಡಿಎ ಸಂಶೋಧನೆ ಕೈಗೊಂಡಿತ್ತು.

2007ರಿಂದ 2009ರ ವರೆಗೆ ಆಮದಾಗಿರುವ ಆಹಾರ ಪದಾರ್ಥಗಳ ಸಂಶೋಧನೆ ನಡೆಸಿದಾಗ ಅದರಲ್ಲಿ ಶೇ 7ರಷ್ಟು ಬ್ಯಾಕ್ಟೀರಿಯಾ ಮಿಶ್ರಣವಾಗಿರುವುದು ಪತ್ತೆಯಾಗಿದೆ.

ಸಂಶೋಧನೆಯಿಂದ ಬಂದ ವರದಿಗಳ ಪ್ರಕಾರ ಈ ಆಹಾರ ಸೇವೆನೆಯಿಂದಾಗಿ ಪ್ರತಿವರ್ಷ ಲಕ್ಷಾಂತರ ಜನರು ಭೇದಿ, ಹೊಟ್ಟೆಭಾದೆ, ಜ್ವರದಿಂದ ಬಳಲುತ್ತಿದ್ದಾರೆ.

ಭಾರತ 2031ನೇ ಸಾಲಿನಲ್ಲಿ ರೂ. 11,100 ಕೋಟಿ ಮೌಲ್ಯದ ಏಳು ಲಕ್ಷ ಟನ್ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡಿದೆ. 2012ನೇ ಸಾಲಿನಲ್ಲಿ ರೂ. 9. 700 ಕೋಟಿ ಮೌಲ್ಯದ 5.75 ಲಕ್ಷ ಟನ್ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT