ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಹಿಳೆಗೆ `ಸಪ್ತ ಶಿಖರಶೃಂಗ'ದ ಕನಸು

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜಮ್‌ಶೆಡ್‌ಪುರ (ಪಿಟಿಐ): ಭಾರತದ ಪವರ್ತಾರೋಹಿ ಪ್ರೇಮಲತಾ ಅಗರ್‌ವಾಲ್ ಅವರು `ಸಪ್ತ ಶಿಖರಶೃಂಗ' (ಏಳು ಖಂಡಗಳ ಅತ್ಯುನ್ನತ ಶಿಖರಗಳು) ಏರಿದ ಕನಸನ್ನು ನನಸು ಮಾಡಿಕೊಳ್ಳುವ ಅದಮ್ಯ ಹಂಬಲದಿಂದ ಅಮೆರಿಕಗೆ ಹೊರಟಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಉತ್ತರ ಅಮೆರಿಕ ಖಂಡದ `ಮೌಂಟ್ ಮೆಕಿನ್ಲಿ' (6196 ಮೀಟರ್) ಪರ್ವತಾರೋಹಣ ಸಾಹಸ ಕಾರ್ಯಕ್ರಮದಲ್ಲಿ 47 ವರ್ಷ ವಯಸ್ಸಿನ ಪ್ರೇಮಲತಾ ಅವರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಅವರು ಏಪ್ರಿಲ್ 29ರಂದು ಅಮೆರಿಕಗೆ ತೆರಳಲಿದ್ದಾರೆ.

ಈ ಗಮ್ಯವನ್ನು ಅವರು ಯಶಸ್ವಿಯಾಗಿ ತಲುಪಿದರೆ `ಸಪ್ತ ಶಿಖರಶೃಂಗ'ಗಳನ್ನು ಏರಿದ ಸಾಧಕರ ಸಾಲಿಗೆ ಸೇರಲಿದ್ದಾರೆ. ಮಾತ್ರವಲ್ಲದೆ ಈ ಸಾಧಕರ ಸಾಲಿಗೆ ಸೇರುವ ಭಾರತದ ಪ್ರಥಮ ಮಹಿಳೆಯೂ, ವಿಶ್ವದಲ್ಲೇ ಹಿರಿಯ ವಯಸ್ಸಿನ ಮಹಿಳೆಯೂ ಆಗಲಿದ್ದಾರೆ ಎಂದು ಟಾಟಾ ಸ್ಟೀಲ್ ಸಾಹಸ ಪ್ರತಿಷ್ಠಾನದ ಮುಖ್ಯಸ್ಥ ಬಚೇಂದ್ರಿ ಪಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

`ಪ್ರೇಮಲತಾ ಅವರು ಈ ಹಿಂದೆ `ಮೌಂಟ್ ಮೆಕಿನ್ಲಿ'ಯನ್ನು ಏರುವ ಪ್ರಯತ್ನ ಮಾಡಿದ್ದರು. ಶಿಖರದ ತುದಿಗೆ ಇನ್ನು 700 ಮೀಟರ್ ಬಾಕಿ ಇದ್ದಾಗ ಇದ್ದಕ್ಕಿದ್ದಂತೆ ಉಂಟಾದ ಹವಾಮಾನ ವೈಪರೀತ್ಯ ಕಾರಣ ಅವರು ಗಮ್ಯವನ್ನು ತಲುಪಲು ಆಗಲಿಲ್ಲ. ಈ ಸಾರಿ ಆ ಕನಸನ್ನು ನನಸು ಮಾಡಲಿದ್ದಾರೆ' ಎಂದು ಪಾಲ್ ಹೇಳಿದ್ದಾರೆ.

ಜಾರ್ಖಂಡ್‌ನ ನಿವಾಸಿಯಾದ ಈ ಗೃಹಿಣಿ, ಇದುವರೆಗೆ `ಸಪ್ತ ಶಿಖರಶೃಂಗ'ದ ಪಟ್ಟಿಯಲ್ಲಿರುವ ಆರು ಶಿಖರಗಳನ್ನು ಏರಿದ ಸಾಹಸಿ. ಈ ಆರು ಶಿಖರಗಳು- `ಮೌಂಟ್ ಎವರೆಸ್ಟ್ (ಗೌರಿಶಂಕರ)' (8848 ಮೀಟರ್- ಏಷ್ಯಾ, ನೇಪಾಳ), `ಮೌಂಟ್ ಎಲ್‌ಬ್ರುಸ್' (5642 ಮೀಟರ್- ಯುರೋಪ್, ರಷ್ಯಾ), `ಮೌಂಟ್ ಕಿಲಿಮಂಜರೊ' (5895 ಮೀಟರ್- ಆಫ್ರಿಕ, ತಾಂಜೇನಿಯಾ), `ಮೌಂಟ್ ವಿನ್‌ಸನ್' (4897 ಮೀಟರ್- ಅಂಟಾರ್ಕ್ಟಿಕ), `ಮೌಂಟ್ `ಮೌಂಟ್  ಅಕೊನ್‌ಕಗುವ' (6962 ಮೀಟರ್- ದಕ್ಷಿಣ ಅಮೆರಿಕ, ಅರ್ಜೆಂಟೀನಾ), `ಮೌಂಟ್  ಕಾರ್‌ಸ್ಟನ್ಜ್ ಪಿರಮಿಡ್ (4884 ಮೀಟರ್- ಆಸ್ಟ್ರೇಲಿಯಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT