ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮುಡಿಗೆ ವಿಶ್ವಕಪ್

ಕಬಡ್ಡಿ: ಆತಿಥೇಯ ಮಹಿಳಾ ತಂಡಕ್ಕೂ ಪ್ರಶಸ್ತಿ
Last Updated 15 ಡಿಸೆಂಬರ್ 2012, 20:08 IST
ಅಕ್ಷರ ಗಾತ್ರ

ಲುಧಿಯಾನ, ಪಂಜಾಬ್ (ಐಎಎನ್‌ಎಸ್): ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತ ಪುರುಷರ ತಂಡದವರು ಇಲ್ಲಿ ನಡೆದ ಮೂರನೇ  ವಿಶ್ವಕಪ್ ಕಬಡ್ಡಿಯಲ್ಲಿ ಚಾಂಪಿಯನ್ ಆದರು.

ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ 59-22 ಪಾಯಿಂಟ್‌ಗಳಿಂದ ಪಾಕ್ ತಂಡವನ್ನು ಮಣಿಸಿತು. ಚಾಂಪಿಯನ್ ಭಾರತ 2 ಕೋಟಿ ರೂಪಾಯಿ ಬಹುಮಾನ ಪಡೆದರೆ, ರನ್ನರ್ ಅಪ್ ಪಾಕ್ 1 ಕೋಟಿ ರೂ. ಬಹುಮಾನ ತನ್ನದಾಗಿಸಿಕೊಂಡಿತು. ಮೂರನೇ ಸ್ಥಾನ ಗಳಿಸಿದ ಕೆನಡಾ 51 ಲಕ್ಷ ರೂ. ಬಹುಮಾನ ಪಡೆದುಕೊಂಡಿತು.

ಮಹಿಳಾ ತಂಡಕ್ಕೂ ಪ್ರಶಸ್ತಿ: ಫೈನಲ್ ಹೋರಾಟದಲ್ಲಿ ಮಲೇಷ್ಯಾ ತಂಡವನ್ನು ಬಗ್ಗುಬಡಿದ ಭಾರತ ಮಹಿಳಾ ತಂಡದವರೂ ವಿಶ್ವಕಪ್ ಎತ್ತಿ ಹಿಡಿದರು. ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಭಾರತ 72-12ಪಾಯಿಂಟ್‌ಗಳಿಂದ ಮಲೇಷ್ಯಾವನ್ನು ಸೋಲಿಸಿತು. ಒಟ್ಟು 16 ತಂಡಗಳು ಈ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದವು. ಈ ಟೂರ್ನಿ ಇದೇ ಒಂದರಂದು ಆರಂಭಗೊಂಡಿತ್ತು.

ಮೊತ್ತ ಹೆಚ್ಚಳ: ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಪಂಜಾಬ್ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ `ಮುಂದಿನ ವರ್ಷದಿಂದ ಮಹಿಳಾ ವಿಭಾಗದ ಪ್ರಶಸ್ತಿ ಮೊತ್ತವನ್ನು 51 ಲಕ್ಷ ರೂ. ನಿಂದ 1 ಕೋಟಿ ರೂ.ಗೆ ಹೆಚ್ಚಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT