ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಚೀನೀ ಭಾಷೆ

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಸಿ) ಮ್ಯಾಂಡರಿನ್ ಭಾಷಾ ಕಲಿಕೆಯ ಫೌಂಡೇಷನ್ ಕೋರ್ಸ್ ಒಂದನ್ನು ಪ್ರಾರಂಭಿಸಲಿದೆ. 2011-12ರ ಶೈಕ್ಷಣಿಕ ವರ್ಷದಿಂದ ಶುರುವಾಗಲಿರುವ ಈ ಕೋರ್ಸನ್ನು ಏಳನೇ ತರಗತಿಯ ನಂತರದ ವಿದ್ಯಾರ್ಥಿಗಳು ಮಾಡಬಹುದು.

ಜಾಗತೀಕರಣದ ಈ ಕಾಲಮಾನದಲ್ಲಿ ಸಂವಹನಕ್ಕೆ ಹೆಚ್ಚು ಪ್ರಾಮುಖ್ಯ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ದಾಪುಗಾಲಿಟ್ಟಿರುವುದುಗೊತ್ತಿದೆಯಷ್ಟೆ. ಅಲ್ಲಿನವರು ಇಂಗ್ಲಿಷ್ ನೆಚ್ಚಿಕೊಳ್ಳದೆ ತಮ್ಮ ಭಾಷೆಯಲ್ಲೇ ವ್ಯವಹರಿಸುವುದರಲ್ಲಿ ನಿಸ್ಸೀಮರು. ಚೀನಾದ ಉಪಭಾಷೆ ಮ್ಯಾಂಡರಿನ್. ಈ ಭಾಷೆಯನ್ನು ಬಳಸುವವರ ಸಂಖ್ಯೆ ಚೀನಾದಲ್ಲಿ ಜಾಸ್ತಿಯೇ ಇದೆ.
 
‘ಪುಟೊಂಗುವಾ’ ಎಂದೂ ಹೆಸರಾದ ಮ್ಯಾಂಡರಿನ್ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ದ ಅಧಿಕೃತ ಭಾಷೆಯೂ ಹೌದು. ತೈವಾನ್‌ನಲ್ಲೂ ಈ ಭಾಷೆ ಬಳಕೆಯಲ್ಲಿದೆ. ಸಿಂಗಪೂರ್‌ನ ನಾಲ್ಕು ಭಾಷೆಗಳಲ್ಲಿ ಇದೂ ಒಂದು. ವಿಶ್ವದಾದ್ಯಂತ ‘ಸ್ಟ್ಯಾಂಡರ್ಡ್ ಮ್ಯಾಂಡರಿನ್’ ಭಾಷೆಯನ್ನು ಎಂಟು ಕೋಟಿಗೂ ಹೆಚ್ಚು ಜನ ಬಳಸುತ್ತಾರೆ. ಹಾಗಾಗಿ ಈ ಭಾಷಾ ಕಲಿಕೆಗೆ ಸಿಬಿಎಸ್‌ಸಿ ಆದ್ಯತೆ ನೀಡುತ್ತಿದೆ. ಉದ್ಯೋಗಾವಕಾಶ ಸೃಷ್ಟಿಯಾಗಲಿದೆ
ಎಂಬ ಕಾರಣಕ್ಕೆ ಮ್ಯಾಂಡರಿನ್ ಭಾಷಾ ಕಲಿಕೆಗೆ ಮುಗಿಬೀಳುತ್ತಿರುವವರೂ ಅಸಂಖ್ಯ.

ಹಿಂದಿ, ಮರಾಠಿ ಬರೆಯಲು ಬಳಸುವ ದೇವನಾಗರಿ ಶೈಲಿಯನ್ನು ಬಳಸಿ ಮ್ಯಾಂಡರಿನ್ ಭಾಷೆಯನ್ನು ಭಾರತದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಕಲಿಯಲು ಕಷ್ಟಕರ ಎನ್ನಲಾದ ಈ ಭಾಷೆಯಲ್ಲಿ ಪರಿಣತಿ ಸಾಧಿಸುವುದು ಸುಲಭವಲ್ಲ. ಮುಂದೆ ಭಾರತದಲ್ಲೂ ಮ್ಯಾಂಡರಿನ್ ನಿಪುಣರು ಹುಟ್ಟಿಕೊಳ್ಳಲಿದ್ದಾರೆಂಬುದಕ್ಕೆ ಇದುವೇ ನಾಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT