ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಂದಿಗೆ ಸಮಗ್ರ ಮಾತುಕತೆಗೆ ಪಾಕ್ ಒಲವು: ಷರೀಫ್

Last Updated 17 ಸೆಪ್ಟೆಂಬರ್ 2013, 10:31 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಸುಧಾರಿಸಲು ತಮಗೆ ಜನತೆ ಅಧಿಕಾರ ನೀಡಿದ್ದಾರೆ ಎಂದು ಪ್ರತಿಪಾದಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಭಾರತದೊಂದಿಗೆ ಸಮಗ್ರ ಮಾತುಕತೆ ನಡೆಸಲು ಒಲವು ತೋರಿದ್ದಾರೆ.

`ಜಮ್ಮು ಮತ್ತು ಕಾಶ್ಮೀರ ವಿವಾದವೂ ಸೇರಿದಂತೆ ಭಾರತದೊಂದಿಗೆ ಗಂಭೀರ, ಸುಸ್ಥಿರ ಹಾಗೂ ರಚನಾತ್ಮಕ ಮಾತುಕತೆಗೆ ಬದ್ಧ' ಎಂದು ಷರೀಫ್ ತಿಳಿಸಿದ್ದಾರೆ.

ಇತ್ತೀಚಿಗೆ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ಭವಿಸಿದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಕಳವಳಕಾರಿ ವಿಷಯ ಎಂದು ಬಣ್ಣಿಸಿರುವ ಷರೀಫ್, ಪರಿಸ್ಥಿತಿಯನ್ನು  ಪಾಕಿಸ್ತಾನ `ಸಂಯಮ ಹಾಗೂ ಹೊಣೆಗಾರಿಕೆ'ಯಿಂದ ನಿಭಾಯಿಸಲಿದೆ ಎಂದಿದ್ದಾರೆ.

  `ಎಲ್ಲಾ ರಾಷ್ಟ್ರಗಳೊಂದಿಗೆ, ಅದರಲ್ಲೂ ನೆರೆಯ ರಾಷ್ಟ್ರಗಳೊಂದಿಗೆ ಸ್ಥಿರ ಹಾಗೂ ಸಹಕಾರಯುತ ಬಾಂಧವ್ಯಕ್ಕೆ ಅನುಕೂಲವಾದ ವಿದೇಶಾಂಗ ನೀತಿಯನ್ನು ತಮ್ಮ ಸರ್ಕಾರ ಅನುಸರಿಸುತ್ತಿದೆ' ಎಂದು ಟರ್ಕಿ ಮಾಧ್ಯಮ ಜಾಲಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಷರೀಫ್ ಹೇಳಿದ್ದಾರೆ.

`ಸಾಮಾಜಿಕ - ಆರ್ಥಿಕ ಕಾರ್ಯಸೂಚಿಯ ಪರಿಣಾಮಕಾರಿ ಅನುಸರಣೆಗಾಗಿ ಎಲ್ಲ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ನಮ್ಮ ಸರ್ಕಾರದ ಅಗತ್ಯ ಮತ್ತು ಆದ್ಯತೆ' ಎಂದು ಮೂರು ದಿನಗಳ ಟರ್ಕಿ ಪ್ರವಾಸದಲ್ಲಿರುವ ಷರೀಫ್ ಹೇಳಿರುವುದಾಗಿ ಪಾಕ್ ತಿಳಿಸಿದೆ.

`ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವ ಉದ್ದೇಶದಿಂದ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಯಾವಾಗಲೂ ನಾನು ಹೆಚ್ಚಿನ ಪ್ರಾಶಸ್ತ್ಯ  ನೀಡುತ್ತೇನೆ' ಎಂದೂ ಷರೀಫ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT