ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀತೀರ್ಥರಿಗೆ ಅದ್ದೂರಿ ಸ್ವಾಗತ

Last Updated 6 ಏಪ್ರಿಲ್ 2013, 6:55 IST
ಅಕ್ಷರ ಗಾತ್ರ

ಶೃಂಗೇರಿ: ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 403 ದಿನಗಳ ಧರ್ಮಪ್ರಚಾರ ಯಾತ್ರೆ ಪೂರೈಸಿ ಶುಕ್ರವಾರ ಸಂಜೆ ಪುರಪ್ರವೇಶ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರಿನಿವಾಸ್ ತಾಲ್ಲೂಕಿನ ಪರವಾಗಿ ಫಲಪುಷ್ಪ ನೀಡಿ ಸ್ವಾಮೀಜಿ ಅವರನ್ನು ಸ್ವಾಗತಿಸಿದರು. ನಂತರ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಶ್ರಿಮಠಕ್ಕೆ ವಿಶೇಷವಾಗಿ ಸಿದ್ಧಪಡಿಸಿದ್ದ ರಥದಲ್ಲಿ ಸ್ವಾಮೀಜಿಯವರನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ಕರೆದೊಯ್ಯ ಲಾಯಿತು. ಪಟ್ಟಣದ ಸ್ವಾಗತ ದ್ವಾರದ ಬಳಿ ಇರುವ ಮಸೀದಿ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಫಲಪುಷ್ಪ ಸಮರ್ಪಣೆ ಮಾಡಲಾಯಿತು.

ಸಾವಿರಾರು ಜನರು ಪಾಲ್ಗೊಂಡಿದ್ದ ಮೆರವಣಿ ೆಯಲ್ಲಿ ಆನೆ, ಕುದುರೆ, ತಟ್ಟಿರಾಯ, ಸ್ಥಬ್ದಚಿತ್ರಗಳು, ವಿಶೇಷ ವಾದ್ಯಗಳು ಮೆರುಗು ನೀಡಿದವು. ವಿವಿಧ ಭಜನಾ ಮಂಡಳಿಯ ಸದಸ್ಯರು ದಾರಿಯುದ್ದಕ್ಕೂ ದೇವರನಾಮಗಳನ್ನು ಹಾಡುತ್ತಾ ಸಾಗಿದರು.

ಧರ್ಮ ಯಾತ್ರೆ:  ಶಾರದಾ ಪೀಠದ ಸ್ವಾಮೀಜಿ ಯವರ ಧರ್ಮಪ್ರಚಾರ ಯಾತ್ರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಶಾರದಾ ಪೀಠದಲ್ಲಿರುವಾಗ ನಡೆಯುವ ಎಲ್ಲಾ ದೈನಂದಿನ ಪೂಜಾ ವಿಧಿವಿಧಾನಗಳು, ಹಬ್ಬಗಳು ಯಾತ್ರಾ ಸಂದರ್ಭದಲ್ಲೂ ನಡೆಯುತ್ತವೆ.

ಇದಕ್ಕೆ ಅಗತ್ಯವಿರುವ ಅರ್ಚಕರು, ಪರಿಚಾರಕರು ಮತ್ತು ಸಿಬ್ಬಂದಿ ವರ್ಗ ಸ್ವಾಮೀಜಿಯವರ ಕ್ಯಾಂಪ್‌ನೊಂದಿಗೆ ಸಂಚರಿಸುತ್ತಾರೆ.ಕೃಷ್ಣಗಿರಿಯಿಂದ ಸ್ವಾಮೀಜಿಯವರ ತಮಿಳುನಾಡು ಯಾತ್ರೆ ಆರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT