ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಉದ್ಯಮಿಗೆ ಬ್ಲ್ಯಾಕ್‌ಬೆರಿ ಒಡೆತನ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಕೆನಡಾ ಮೂಲದ ಸ್ಮಾರ್ಟ್‌­­ಫೋನ್‌ ತಯಾರಿಕಾ ಕಂಪೆನಿ ಬ್ಲ್ಯಾಕ್‌ಬೆರಿಯನ್ನು ಭಾರತೀಯ ಮೂಲದ ಕೆನಡಾ ಉದ್ಯಮಿ ಪ್ರೇಮ್‌ ವತ್ಸಾ ಒಡೆತನದ ಫೇರ್‌ಫಾಕ್ಸ್ ಫೈನಾ­ಶ್ಶಿಯಲ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌  ಅಂದಾಜು ₨28,200 ಕೋಟಿಗೆ (470 ಕೋಟಿ ಡಾಲರ್‌– ಪ್ರತಿ ಷೇರಿಗೆ 9 ಡಾಲರ್‌ನಂತೆ) ಖರೀ­ದಿಸಲು ಒಪ್ಪಂದ ಮಾಡಿಕೊಂಡಿದೆ.

ಪ್ರೇಮ್ ವತ್ಸಾ ಹುಟ್ಟಿದ್ದು ಹೈದರಾ­ಬಾದ್‌ನಲ್ಲಿ. ಈಗ ಅವರ ಕುಟುಂಬ ಟೊರಾಂಟೊದಲ್ಲಿ ನೆಲೆಗೊಂ­ಡಿದೆ. ಬ್ಲ್ಯಾಕ್‌­ಬೆರಿ ಕಂಪೆನಿಯಲ್ಲಿ ಗರಿಷ್ಠ ಷೇರು­ಪಾಲು ಹೊಂದಿರುವವರಲ್ಲಿ ಪ್ರೇಮ್‌ ಕೂಡ ಒಬ್ಬರು. ಆಗಸ್ಟ್‌ನಲ್ಲಿ ಅವರು ಬ್ಲ್ಯಾಕ್‌ಬೆರಿ ನಿರ್ದೇಶಕ ಮಂಡಳಿ­ಯಿಂದ ಹೊರಬಂದಿದ್ದರು.

ಪ್ರೇಮ್‌ ವತ್ಸಾ ಅವರನ್ನು ‘ಕೆನಡಾದ ವಾರೆನ್‌ ಬಫೆಟ್‌’ ಎಂದೂ ಕರೆಯ­ಲಾಗುತ್ತದೆ. 

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆಪಲ್‌ ಮತ್ತು ಸ್ಯಾಮ್ಸಂಗ್‌ನಿಂದ ಬ್ಲ್ಯಾಕ್‌ಬೆರಿ  ತೀವ್ರ ಸ್ಫರ್ಧೆ ಎದುರಿ­ಸುತ್ತಿದೆ. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕಂಪೆನಿ 4,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT