ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಪ್ರತಿಭೆಗೆ ವಿಶ್ವ ಮಾನ್ಯತೆ

Last Updated 20 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ಗಜೇಂದ್ರಗಡ: ಭಾರತೀಯ ಯುವಕರಲ್ಲಿನ ಪ್ರತಿಭೆಗೆ ವಿಶ್ವ ಮಾನ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯುವಕರು ಪಾಶ್ಚಿಮಾತ್ಯರ ಸಂಸ್ಕೃತಿಯ ಅನುಕರಣೆ ಮೂಲಕ ಕ್ಷಣಿಕ ಸುಖಗಳಿಗೆ ಆಕರ್ಷಿತ ರಾಗಿ ಅಮೂಲ್ಯ ಬದುಕು ನಾಶಪಡಿಸಿ ಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದು ಗಜೇಂದ್ರಗಡ ಪಿಎಸ್‌ಐ ವೀರಾರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ರೋಣ ರಸ್ತೆಯಲ್ಲಿನ ಅನ್ನದಾನೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಗಜೇಂದ್ರಗಡ ಪೂಲೀಸ್ ಠಾಣೆ ಹಾಗೂ ಅನ್ನದಾನೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ಆಶ್ರಯದಲ್ಲಿ  ನಡೆದ `ಅಂತರ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ~ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕಲೆ, ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಕ್ಕೆ ಭಾರತೀಯ ಯುವಕರ ಕೊಡುಗೆ ಅಮೋಘ. ಭಾರತೀಯ ಪ್ರತಿಭಾವಂತ ಯುವಕರನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಕೈಬಿಸಿಕರೆಯುತ್ತಿವೆ. ಇವರ ಸಾಧನೆಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ತಮ್ಮ ರಾಷ್ಟ್ರಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿಕೊಳ್ಳು ಶ್ರಮಿಸುತ್ತಿವೆ.

ಆದರೆ, ಭಾರತೀಯರು ಮಾತ್ರ ಪ್ರತಿಭಾವಂತ ಯುವಕರ ಸಾಧನೆಗೆ ಸೂಕ್ತ ವೇದಿಕೆ ಒದಗಿಸುತ್ತಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಅಭಿವೃದ್ಧಿ  ಕಡಿಮೆ ಎಂದು ವಿಷಾದಿಸಿದರು. 

ರಾಷ್ಟ್ರದ ಶೇ.56 ರಷ್ಟು ಪ್ರತಿಭಾವಂತ ಯುವಕರು ಉದ್ಯೋಗಕ್ಕಾಗಿ  ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತೆರಳಿದಾಗ ಪಾಶ್ಚಿಮಾತ್ಯರ ಸಂಸ್ಕೃತಿಗೆ ಒಳಪಡುತ್ತಿದ್ದಾರೆ. ಇದರಿಂದಾಗಿ ಮಾದಕ ಪದಾರ್ಥಗಳ ಸೇವನೆಗೆ ಒಳಗಾಗಿ ಆರೋಗ್ಯ ಯುತ ಬದುಕಿನಿಂದ ವಂಚಿತಗೊಂಡು ಅರಳುವ ಮುನ್ನವೇ ಮಸಣದ ಹಾದಿ ಹಿಡಿಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು  ಬೇಸರ ವ್ಯಕ್ತ ಪಡಿಸಿದರು.

ಅನ್ನದಾನೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎ.ಪಿ.ಗಾಣಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಸಮಾಜದ ಜವಾಬ್ದಾರಿ ಅತ್ಯಂತ ಮಹತ್ವದಾಗಿದೆ ಎಂದರು.

 ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುವುದರ ಜೊತೆಗೆ ಮಾದಕ ದುಶ್ಚಟಗಳಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಇದೆ. ಮಾದಕ ವಸ್ತುಗಳ ತಯಾರಿಕಾ ಕಂಪನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ   ಬಳಸಿ ದ್ರವ್ಯಗಳನ್ನು ತಯಾರಿಸಲು ಮುಂದಾಗುತ್ತಿವೆ. ಇಂತಹ ಅಪಾಯಕಾರಿ ದ್ರವ್ಯಗಳ ಸೇವ ೆಯಿಂದಾಗಿ  ಅಮೂಲ್ಯ ಬದುಕನ್ನು ವಿನಾಶದತ್ತ ಕೊಂಡೊಯ್ಯುತ್ತಿರುವುದು ವಿಷಾದದ ಸಂಗತಿ ಯಾಗಿದೆ ಎಂದರು.

ಎ.ಎಸ್.ಐ ಹೆಚ್.ಎಸ್.ದಾಸರ, ಗೌಡರ, ಬಿ.ಬಿ.ಸೂಡಿ, ವಿ.ಎನ್.ಗಂಜಿಗೌಡರ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT